ಬಾಂಬ್ ನಿಷ್ಕ್ರಿಯ ದಳವು ಅಪಾಯಕಾರಿ ಸ್ಫೋಟಕ ಸಾಮಗ್ರಿ ಗಳನ್ನು ಪತ್ತೆ ಮಾಡಿ ಅವು ಸ್ಫೋಟಿಸದಂತೆ ನಿಷ್ಕ್ರಿಯಗೊಳಿಸುವ ಹೊಣೆಗಾರಿಕೆ ಹೊತ್ತಿದೆ. ಆದರೆ ಬಾಂಬ್ ನಿಷ್ಕ್ರಿಯ ದಳವು ಸ್ಫೋಟಕ ಸಾಮಗ್ರಿಗಳಿಂದ ಮಲಿನಗೊಂಡ ಜಾಗವನ್ನು ನೇರ್ಪುಗೊಳಿಸುವ ಕೆಲಸ ಮಾಡುವುದಿಲ್ಲ.
ಇತಿಹಾಸ:
ವಿಶ್ವದ ಪ್ರಪ್ರಥಮ ವೃತ್ತಿಪರ ನಾಗರಿಕ ಬಾಂಬ್ ದಳವನ್ನು ಸರ್ ವಿವಿಯನ್ ಡೆರಿಂಗ್ ಮೆಜೆಂಡೀ ಅವರು ಸ್ಥಾಪಿಸಿದರು. ರಾಯಲ್ ಆರ್ಟಿಲ್ಲರಿಯ ಮೇಜರ್ ಆಗಿದ್ದ ಮೆಜೆಂಡೀ ಅವರು 1874ರ ಅಕ್ಟೋಬರ್ 2ರಂದು ನಡೆದ ಸ್ಫೋಟವೊಂದರ ತನಿಖೆ ನಡೆಸಿದರು. ಆ ಸ್ಫೋಟ ಪ್ರಕರಣದಲ್ಲಿ ಹಲವಾರು ಬ್ಯಾರೆಲ್ ಪೆಟ್ರೋಲಿಯಂ ಮತ್ತು 5 ಟನ್ ಗನ್ಪೌಡರ್ ಹೊತ್ತೊಯ್ಯುತ್ತಿದ್ದ ಟಿಲ್ಬರಿ ನೌಕೆಯು ಲಂಡನ್ನ ಮೃಗಾಲಯದ ಸಮೀಪ ಮ್ಯಾಕಲ್ಸ್ ಫೀಲ್ಡ್ ಸೇತುವೆ ಬಳಿ ನಡೆದ ಸ್ಫೋಟದಲ್ಲಿ ಸೇತುವೆ–ನೌಕೆ ಉಧ್ವಸ್ತ ಗೊಂಡು ನೌಕೆಯಲ್ಲಿದ್ದ ಸಿಬ್ಬಂದಿ ಸಾವನ್ನಪ್ಪಿದರು.
1875ರಲ್ಲಿ ಮೆಜೆಂಡೀ ಸ್ಫೋಟಕಗಳ ಅಧಿನಿಯಮವನ್ನು ರೂಪಿಸಿದರು. ಇದು ಸ್ಫೋಟಕಗಳ ನಿಗ್ರಹ ಕುರಿತ ಪ್ರಪ್ರಥಮ ಆಧುನಿಕ ಶಾಸನ. ಮೆಜೆಂಡೀ ಅವರು ಅನೇಕ ಬಾಂಬ್ ನಿಷ್ಕ್ರಿಯ ತಂತ್ರಜ್ಞಾನಗಳನ್ನು ಜಾರಿಗೆ ತಂದರು. ಇದರಲ್ಲಿ ದೂರದಿಂದಲೇ ಬಾಂಬ್ ನಿಷ್ಕ್ರಿಯಗೊಳಿಸುವ ಪದ್ಧತಿಯೂ ಸೇರಿದೆ.
ಇವರ ಸಲಹೆ ಮೇರೆಗೆ ಆರಂಭವಾದ 1881-85ರ ಅವಧಿಯ ಫೆನಿಯನ್ ಡೈನಮೈಟ್ ಸುರಕ್ಷತಾ ಪ್ರಚಾರಾಂದೋಲನವು ಶ್ರೀಸಾಮಾನ್ಯರ ಜೀವರಕ್ಷಣೆಯ ದೃಷ್ಟಿಯಲ್ಲಿ ಮಹತ್ತರ ಪಾತ್ರ ವಹಿಸಿತು.
1884ರ ಫೆಬ್ರವರಿ 26ರಂದು ವಿಕ್ಟೋರಿಯಾ ಪ್ರದೇಶದಲ್ಲಿ ಸ್ಫೋಟಗೊಳ್ಳಬಹುದಾಗಿದ್ದ ಟೈಮ್ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಅಪಾರ ಜೀವಹಾನಿಯನ್ನು ತಪ್ಪಿಸಿದ್ದರು.
ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆ 1903ರಲ್ಲಿ ತನ್ನ ಮೊಟ್ಟಮೊದಲ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಾಪಿಸಿತು. ಇಟಾಲಿಯನ್ ಸ್ಕ್ವ್ಯಾಡ್ ಎಂಬ ಹೆಸರಿನಲ್ಲಿ ಈ ದಳವು ನಾಗರಿಕರನ್ನು ಬೆದರಿಸುವ ನಿಟ್ಟಿನಲ್ಲಿ ಭೂಗತ ಜಗತ್ತು ಬಳಸುವ ಸ್ಫೋಟಕ ಸಾಮಗ್ರಿಗಳನ್ನು ಸತ್ವಹೀನಗೊಳಿಸುವ ಹೊಣೆಗಾರಿಕೆ ಹೊಂದಿತ್ತು. ಇಟಲಿಯ ಪೌರರು ಮತ್ತು ವರ್ತಕರಲ್ಲಿ ಭಯೋತ್ಪಾದನೆ ಸಲುವಾಗಿ ಮಾಫಿಯಾ ಜಗತ್ತು ಬಳಸುತ್ತಿದ್ದ ಸ್ಫೋಟಕಗಳನ್ನು ನಿಃಸತ್ವಗೊಳಿಸುವ ಕೆಲಸವನ್ನು ಈ ಪಡೆ ಮಾಡುತ್ತಿತ್ತು. ಅನಂತರ ಈ ದಳವನ್ನು ಆನಾರ್ಕಿಸ್ಟ್ ಸ್ಕ್ವಾಡ್ ಮತ್ತು ರ್ಯಾಡಿಕಲ್ ಸ್ಕ್ವ್ಯಾಡ್ ಎಂದು ಕರೆಯಲಾಯಿತು.
ಪ್ರಥಮ ವಿಶ್ವಯುದ್ಧ:
ಪ್ರಥಮ ಮಹಾಯುದ್ಧದ ವೇಳೆ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯವು ಒಂದು ಅಧಿಕೃತ, ಔಪಚಾರಿಕ ಪದ್ಧತಿಯಾಗಿ ರೂಪುಗೊಂಡಿತು. ಸಮೂಹ ನಾಶಕ ಶಸ್ತ್ರಾಸ್ತ್ರಗಳ ವ್ಯಾಪಕ ತಯಾರಿಕೆಯಲ್ಲಿ ಸ್ಫೋಟಕ ಸಾಮಗ್ರಿಗಳು ಬಳಕೆಯಾದ ಆ ಸಂದರ್ಭದಲ್ಲಿ ಪರಸ್ಪರರ ದಾಳಿಗಳನ್ನು ನಿಷ್ಫಲಗೊಳಿಸುವ ನಿಟ್ಟಿನಲ್ಲಿ ಬಾಂಬ್ ನಿಷ್ಕ್ರಿಯ ದಳವು ಮಹತ್ವಪೂರ್ಣ ಪಾತ್ರ ವಹಿಸಿತು. ದಾಳಿ ಮತ್ತು ಸಂರಕ್ಷಣೆ ಹೀಗೆ ಎರಡು ಆಯಾಮಗಳನ್ನು ಹೊಂದಿದ್ದ ಈ ಸಮರದಲ್ಲಿ ಬ್ರಿಟಿಷರು ಈ ಪ್ರವರ್ಧಮಾನ ಸಮಸ್ಯೆಯ ನಿಗ್ರಹಕ್ಕೆ ರಾಯಲ್ ಆರ್ಮಿ ಆರ್ಡನನ್ಸ್ ಕಾಪ್ರ್ಸ್ ಎಂಬ ಶಸ್ತ್ರಾಸ್ತ್ರಗಳ ಪರೀಕ್ಷಣಾ ವಿಭಾಗವನ್ನೇ ಚಾಲನೆಗೊಳಿಸಿದರು.
1918ರಲ್ಲಿ ಜರ್ಮನ್ನರು ವಿಳಂಬಿತ ಕಾರ್ಯಾಚರಣೆಯ ಬಾಂಬ್ಗಳನ್ನು ಆವಿಷ್ಕರಿಸಿದರು. 1930ರ ದಶಕದಲ್ಲಿ ಇದರ ಸುಧಾರಿತ ಆವೃತ್ತಿಗಳು ತಯಾರಾದವು. ನಾಝಿ ಜರ್ಮನಿ ತನ್ನ ರಹಸ್ಯ ಶಸ್ತ್ರಾಸ್ತ್ರ ಅಭಿವೃದ್ಧಿ ಕಾರ್ಯ ಆರಂಭಿಸುತ್ತಿದ್ದಂತೆ ನಡೆಸಲಾದ ಪರಿಶೋಧನೆಗಳನ್ನು ಸ್ಫೋಟಿಸದ ಬಾಂಬ್ (Uಟಿexಠಿಟoಜeಜ bombs oಡಿ – Uಘಿಃ) ಗಳ ಬೆಳವಣಿಗೆಗೆ ನಾಂದಿ ಕಾರಣ ಈ ವಿಳಂಬಿತ ಸ್ಫೋಟಕ ಸಾಮಗ್ರಿಗಳು ನಾಗರಿಕರಲ್ಲಿ ಭೀತಿಯನ್ನುಂಟು ಮಾಡಿದವು. ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವು ಗೊಂದಲದ ಗೂಡಾಯಿತು. ತತ್ಕ್ಷಣವೇ ಸ್ಫೋಟಗೊಳ್ಳುವ ಬಾಂಬ್ಗಳಿಗಿಂತ ಈ ಅನಿರ್ದಿಷ್ಟಾವಧಿ ಸ್ಫೋಟಕಗಳು ಹೆಚ್ಚಿನ ಅಲ್ಲೋಲ ಕಲ್ಲೋಲ ಮತ್ತು ವಿಧ್ವಂಸ ಉಂಟು ಮಾಡುವುದನ್ನು ಜರ್ಮನ್ನರು ಕಂಡುಕೊಂಡರು. ಇದು ಅವರು ಎರಡನೇ ಮಹಾಯುದ್ಧದಲ್ಲಿ ಇದನ್ನು ಬಳಸಿಕೊಳ್ಳಲು ಪ್ರೇರಣೆ ನೀಡಿತು.
ಆರಂಭದಲ್ಲಿ ಈ ರೀತಿಯ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಸಾಧನಗಳು, ತರಬೇತಿ ಅಥವಾ ಮೂಲಭೂತ ತಿಳಿವಳಿಕೆ ಇರಲಿಲ್ಲ ಕ್ರಮೇಣ ತಂತ್ರಜ್ಞರು ಈ ನಿಟ್ಟಿನ ತಂತ್ರಗಳನ್ನು ಅರಿತುಕೊಂಡರು.
ಪ್ರಥಮ ಸೇನಾ ಬಾಂಬ್ ನಿಷ್ಕ್ರಿಯಗೊಳಿಸುವ ತುಕಡಿಗಳನ್ನು ಉತ್ತರ ಆಫ್ರಿಕಾ ಮತ್ತು ಸಿಸಿಲಿಗಳಲ್ಲಿ ನಿಯೋಜಿಸಲಾಯಿತು. ಆದರೆ ಈ ಕಾರ್ಯ ಕ್ಲಿಷ್ಟಕರವಾಗಿದ್ದುದರಿಂದ 1943ರಲ್ಲಿ ಸಂಚಾರಿ-ಸಪ್ತಸದಸ್ಯ ದಳಗಳನ್ನು ನಿಯೋಜಿಸಲಾಯಿತು. 1947ರಲ್ಲಿ ಯುದ್ಧ ಪ್ರಮಾದಗಳನ್ನು ಸರಿಪಡಿಸಿಕೊಳ್ಳಲಾಯಿತು. ಆಗ ಸೇನಾ ಸಿಬ್ಬಂದಿ ಮೇರಿಲ್ಯಾಂಡ್ನಲ್ಲಿ ಅಮೇರಿಕಾದ ನೌಕಾದಳದ ನಿರ್ದೇಶನದಡಿ ಒಂದು ಹೊಸ ಶಾಲೆಯಲ್ಲಿ ಈ ಬಗ್ಗೆ ತರಬೇತಿ ಪಡೆಯಲಾರಂಭಿಸಿದರು. ಅದೇ ವರ್ಷ ಈ ಕುರಿತಂತೆ ಸಂಶೋಧÀನೆ ಸಾಧನ–ಸಲಕರಣೆಗಳ ಅಭಿವೃದ್ಧಿ ಮತ್ತು ಪರೀಕ್ಷಾ ವಿಧಾನಗಳ ಆವಿಷ್ಕಾರ ತ್ವರಿತ ಗತಿಯಲ್ಲಿ ನಡೆದವು. ಹೊಸ ಕಾರ್ಯತಂತ್ರಗಳು, ಮತ್ತು ವಿಧಿವಿಧಾನಗಳ ಶೋಧನೆಯಾಯಿತು.
ಜಾಗತಿಕ ಸವಾಲು:
ಮಂಗನ ಕೈಯಲ್ಲಿ ಮಾಣಿಕ್ಯ ಎಂಬ ರೀತಿ ಭಯೋತ್ಪಾದಕರಂತಹ ದುಷ್ಕರ್ಮಿಗಳಿಗೆ ಸ್ಫೋಟಕಗಳ ತಂತ್ರಜ್ಞಾನ ಕೈವಶವಾಗಿರುವುದರಿಂದ ವಿಶ್ವದ ಭದ್ರತೆಗೆ ಬೆದರಿಕೆ ಯುಂಟಾಗಿದೆ. ಸ್ಫೋಟಕಗಳನ್ನು ಬಳಸಿ ಉಗ್ರಗಾಮಿಗಳು ಜಗತ್ತಿನೆಲ್ಲೆಡೆ ಹಿಂಸಾಚಾರ ಎಸಗುತ್ತ ಸಮೂಹನಾಶಕ ಮನುಕುಲದ ದಾಳಿಗಳೆಂದು ಕುಖ್ಯಾತವಾಗಿವೆ. ಇಂದು ಜಗತ್ತಿನ ಯಾವುದೇ ಭಾಗದಲ್ಲಿ ಭಯೋತ್ಪಾದಕರು, ಉಗ್ರಗಾಮಿಗಳು, ಬಂಡುಕೋರರು, ನಕ್ಸಲೀಯ ಹೋರಾಟಗಾರರು ಸ್ಫೋಟಕಗಳನ್ನು ಬಳಸಿ ಹಿಂಸಾ ಘಟನೆಗಳಿಗೆ ಕಾರಣರಾಗುತ್ತಿದ್ದಾರೆ. ಇಂದು ಯಾವುದೇ ಸ್ಥಳ ಸುರಕ್ಷಿತ ಎನ್ನುವಂತಿಲ್ಲ. ಉಗ್ರರು ಯಾವುದೇ ಸಮಯ, ಯಾವುದೇ ಸ್ಥಳದ ಮೇಲೆ ಎರಗುವ ಸಾಧ್ಯತೆಯುಂಟು. ಈ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಸಾಮಥ್ರ್ಯ, ಕಣ್ಗಾವಲು ಹೆಚ್ಚಿಸುವ ಆವಶ್ಯಕತೆ ಅಧಿಕವಾಗಿದೆ.
ಬೆಂಗಳೂರು ಸಹ ಹೊರತಲ್ಲ:
ಈ ಹಿಂದೆ ಕರ್ನಾಟಕ ಮತ್ತು ಅದರ ರಾಜಧಾನಿ ಬೆಂಗಳೂರು ಅತ್ಯಂತ ಸುರಕ್ಷಿತ ಎನ್ನುವ ಭಾವನೆ ಇತ್ತು. ಆದರೆ ಇಲ್ಲಿ ಎರಡು ಬಾರಿ ಲಘು ಭೂಕಂಪನದ ಅನುಭವ ಈ ಭಾವನೆಗಳನ್ನು ಹುಸಿಗೊಳಿಸಿತು.
ಅದೇ ರೀತಿ ಬೆಂಗಳೂರಿನ ಮೇಲೆ ಬಾಂಬ್ ದಾಳಿ ಸಹ ನಡೆದುದುಂಟು. 2013ರ ಏಪ್ರಿಲ್ 17ರಂದು ಬೆಂಗಳೂರಿನ ಭಾರತೀಯ ಜನತಾಪಕ್ಷ (ಬಿಜೆಪಿ) ದ, ಕಚೇರಿ ಬಳಿ ಬಾಂಬ್ ಸ್ಫೋಟದ ಘಟನೆ ಸಂಭವಿಸಿತು. ಈ ದಾಳಿಯಲ್ಲಿ ಹದಿನಾರು ಜನರು ಗಾಯಗೊಂಡರು. ಕರ್ನಾಟಕ ಗೃಹ ಸಚಿವಾಲಯವು ಇದು ಒಚಿದು ಭಯೋತ್ಪಾದಕ ದಾಳಿ ಎಂದು ಸ್ಪಷ್ಟಪಡಿಸಿತು. ಈ ಸ್ಫೋಟದ ಸಂಬಂಧ ಪೊಲೀಸರು ಸೈಯದ್ ಆಲಿ ಮತ್ತು ಜಹಾನ್ ಆಮಿರ್ ಎಂಬಿಬ್ಬರನ್ನು ಬಂಧಿಸಿದರು. ಗಾಯಾಳುಗಳಲ್ಲಿ ಪೈಕಿ ಮೂವರು ಮಹಿಳೆಯರು ಮತ್ತು ಇಬ್ಬರು ಹದಿವಯಸ್ಕರು ಸೇರಿದ್ದರು. ದಾಳಿ ನಡೆದ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ಹಲವಾರು ವಾಹನಗಳು ಭಸ್ಮವಾದವು. ಹತ್ತಿರದ ಕಟ್ಟಡಗಳು ಹೊತ್ತಿ ಉರಿದವು.
2008ರ ಸರಣಿ ಬಾಂಬ್ ಸ್ಫೋಟ:
2008ರ ಜುಲೈ 25ರಂದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ ಇಬ್ಬರು ಮೃತಪಟ್ಟು 20 ಮಂದಿ ಗಾಯಗೊಂಡರು. ಬೆಂಗಳೂರು ನಗರ ಪೊಲೀಸರ ಪ್ರಕಾರ ಟೈಮರ್ಗಳನ್ನು ಅಳವಡಿಸಿದ ಕಚ್ಚಾ ಬಾಂಬ್ಗಳಿವು. ಭಾರತದಲ್ಲಿ ಅದಾಗಲೇ 2008ರ ಮೇನಲ್ಲಿ ಇದೇ ರೀತಿಯ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ ಅನುಭವ ಆvತ್ತು.
ಬೆಂಗಳೂರಿನ ಮಡಿವಾಳ ಬಸ್ಡಿಪೋ, ಮೈಸೂರು ರಸ್ತೆ, ಆಡುಗೋಡಿ, ಕೋರಮಂಗಲ, ವಿಠ್ಠಲ ಮಲ್ಯ ರಸ್ತೆ, ಲ್ಯಾಂಗ್ ಫೋರ್ಡ್ ಟೌನ್ ಮತ್ತು ರಿಚ್ಮಂಡ್ ಟೌನ್ಗಳಲ್ಲಿ ಒಂದಾದ ಬಳಿಕ ಒಂದರಂತೆ ಸರಣಿ ಸ್ಫೋಟಗಳು ಸಂಭವಿಸಿದವು.
2008ರ ಜುಲೈ 26ರಂದು ಕೋರಮಂಗಲದ ಫೋರಂ ಮಾಲ್ ಬಳಿ ಮತ್ತೊಂದು ಬಾಂಬ್ ಪತ್ತೆಯಾಯಿತಾದರೂ ಬಾಂಬ್ ಪತ್ತೆ ದಳವು ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿತು.
ರೈಲುನಿಲ್ದಾಣ, ಬಸ್‍ನಿಲ್ದಾಣ, ವಿಮಾನ ನಿಲ್ದಾಣ ಮುಂತಾದ ಜನನಿಬಿಡ ಪ್ರದೇಶಗಳನ್ನೇ ಉಗ್ರರು ಗುರಿಯಾಗಿಸಿಕೊಳ್ಳುವುದರಿಂದ ಇಂಥ ಸ್ಥಳಗಳಲ್ಲಿ ಬಾಂಬ್‍ನಂತಹ ಸ್ಫೋಟಕಗಳನ್ನು ಮುಂದಾಗಿಯೇ ಪತ್ತೆಮಾಡಿ ನಿಷ್ಕ್ರಿಯಗೊಳಿಸಿ ಪ್ರಾಣಹಾನಿ-ಆಸ್ತಿಹಾನಿ ತಪ್ಪಿಸುವಲ್ಲಿ ಬಾಂಬ್ ಡಿಸ್ಪೋಸಲ್ ಸÁ್ವ್ಕ್ಯಡ್‍ನ ಪಾತ್ರ ಮಹತ್ತರವಾದದ್ದು. ಈ ತಂಡವು ನಿರ್ದಿಷ್ಟ ರೀತಿಯ ದಿರಿಸುಗಳನ್ನು ಧರಿಸಿ ವಿಶಿಷ್ಟ ಬಗೆಯ ಸಾಧನಗಳ ಮುಖಾಂತರ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿ ಸಾರ್ವಜನಿಕರನ್ನು ರಕ್ಷಿಸುತ್ತದೆ. ಇಂಥ ಸವಾಲಿನ ಅಪಾಯಕಾರಿ ಕೆಲಸಕ್ಕೆ ಈ ತಂಡ ಶ್ವಾನದಳದ ನೆರವನ್ನೂ ಪಡೆಯುತ್ತದೆ.
ಕೆಲವೊಮ್ಮೆ ಹುಸಿಬಾಂಬ್ ಕರೆಗಳು ಬರುವುದುಂಟು. ಅಂತಹ ಸಂದರ್ಭದಲ್ಲಿಯೂ ಈ ತಂಡವು ನಿರ್ಲಕ್ಷ ಮಾಡದೆ ಶ್ವಾನದಳದ ಮೂಲಕ ತಪಾಸಣೆ ನಡೆಸಿ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುತ್ತದೆ.