ತಂತ್ರಜ್ಞಾನ ಮುಂದುವರಿದಂತೆ ಅನುಕೂಲತೆಗಳ ಜೊತೆಜೊತೆಗೇ ಅನಾನುಕೂಲಗಳೂ ಉದ್ಭವಿಸುತ್ತಿವೆ. ಸಕಲ ವ್ಯವಹಾರಗಳೂ ಡಿಜಿಟಲೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಪರಾಧಿಗಳೂ ತಂತ್ರಜ್ಞಾನ ಕ್ಷೇತ್ರಕ್ಕೆ ಕನ್ನ ಕೊರೆಯುವಂತಾಗಿರುವುದು ಸುಳ್ಳಲ್ಲ. ಮನೆಗಳವು ಮುಂತಾದವುಗಳಿಗಿಂತ ತಂತ್ರಜ್ಞಾನ ಸಂಬಂಧಿತ ಅಪರಾಧಗಳೇ ಅಧಿಕವಾಗುತ್ತಿವೆ. ಇವುಗಳನ್ನು ಸೈಬರ್ ಅಪರಾಧಗಳೆನ್ನಲಾಗುತ್ತದೆ. ಮುಂದಿನ ದಿನಗಳಲ್ಲಿ ಸೈಬರ್ ಅಪರಾಧಗಳು ಮತ್ತಷ್ಟು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ದೇಶದಾದ್ಯಂತ ಸಾರ್ವಜನಿಕ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಕಂಪ್ಯೂಟರ್ ಆಧರಿತ ಸೈಬರ್ ತಂತ್ರಜ್ಞಾನ ಬಳಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿಗಳಲ್ಲಿ ಆಗಿರುವ ಹೆಚ್ಚಳ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಚಿಂತೆಗೀಡುಮಾಡಿದೆ. ಸೈಬರ್ ಅಪರಾಧಗಳ ಆಧಿಕ್ಯವನ್ನು ಗಮನಿಸಿ 2001ರಲ್ಲೇ ಸೈಬರ್ ಅಪರಾಧಗಳನ್ನು ನಿಭಾಯಿಸಲು ಬೆಂಗಳೂರಿನ ಸಿಐಡಿ ಕೇಂದ್ರ ಕಚೇರಿಯಲ್ಲಿ ವಿಶೇಷ ಸೈಬರ್ ಘಟಕವನ್ನು ಸ್ಥಾಪಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳ ಜನರನ್ನೂ ತಲುಪುವಂತಾಗಲು ಎಲ್ಲಾ ಜಿಲ್ಲೆಗಳಲ್ಲೂ ಈ ಘಟಕಗಳನ್ನು ತೆರೆಯಲಾಗಿದೆ. ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತಿಸಲಾಗಿದೆ.
ಈ ರೀತಿಯ ಅಪಸವ್ಯಗಳಿಗೆ ಬಲಿಯಾಗದಂತೆ ಪೆÇಲೀಸ್ ಇಲಾಖೆಯು ಪ್ರಚಾರ ಮಾಡುತ್ತಿದ್ದು, ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಜನರ ಸಹಕಾರವನೂ ಅಪೇಕ್ಷಿಸುತ್ತಿದೆ. ಇಂತಹ ಅಪರಾಧ ಪ್ರಕರಣಗಳಿಗೆ ಎಲ್ಲರೂ ಸೇರಿ ಕಡಿವಾಣ ಹಾಕಬೇಕಿದೆ.
ಸೈಬರ್ ಅಪರಾಧ ಪೆÇಲೀಸ್ ಠಾಣೆಯ ಕಾರ್ಯವೈಖರಿ ಹೇಗಿದೆಯೆಂದರೆ ಇಂಥ ಒಂದು ಠಾಣೆ ಅನೇಕ ಪೆÇಲೀಸ್ ಉಪವರಿಷ್ಠಾಧಿಕಾರಿಗಳು (ಪೆÇಲೀಸ್ ಉಪಅಧೀಕ್ಷಕರು), ಪೆÇಲೀಸ್ ಇನ್‍ಸ್ಪೆಕ್ಟರ್‍ಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಡೆಪ್ಯುಟಿ ಡೈರೆಕ್ಟರ್ ಆಫ್ ಪ್ರಾಸಿಕ್ಯೂಷನ್ಸ್ ಮಟ್ಟದ ಓರ್ವ ಕಾನೂನು ಸಲಹೆಗಾರರಿದ್ದು, ಕಾನೂನು ಸಮಸ್ಯೆಗಳಲ್ಲಿ ಪೆÇಲೀಸ್ ಅಧಿಕಾರಿಗಳಿಗೆ ನೆರವು ನೀಡುತ್ತಾರೆ. ಕಾನೂನು ಮತ್ತು ತಾಂತ್ರಿಕ ಅಗತ್ಯಗಳನ್ನಾಧರಿಸಿ ಹೊರಗಡೆಯ ತಜ್ಞರ ನೆರವನ್ನೂ ಪಡೆಯಲಾಗುತ್ತದೆ.
ಸೈಬರ್ ಪೆÇಲೀಸ್ ಠಾಣೆಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯನ್ನು ಪೆÇಲೀಸ್ ವರಿಷ್ಠಾಧಿಕಾರಿ, ಪೆÇಲೀಸ್ ಉಪ ಮಹಾನಿರೀಕ್ಷಕರು (ಡಿಐಜಿಪಿ- ಆರ್ಥಿಕ ಅಪರಾಧಗಳು), ಪೆÇಲೀಸ್ ಮಹಾ ನಿರೀಕ್ಷಕರು, ಆರ್ಥಿಕ ಅಪರಾಧಗಳ ವಿಭಾಗ, ಸಿಐಡಿ ಇಲಾಖೆ, ಇವರು ವಹಿಸಿಕೊಂಡಿರುತ್ತಾರೆ. ಪೆÇಲೀಸ್ ಮಹಾನಿರ್ದೇಶಕರು, ಅಪರಾಧಗಳ ತನಿಖಾ ವಿಭಾಗ, ತರಬೇತಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು ಇವರು ಸಮಗ್ರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಮಾಡುತ್ತಾರೆ.
ಸೈಬರ್ ಅಪರಾಧದ ವಿಧಗಳು
(೧) ಲಾಟರಿ ಮತ್ತು ಬಹುಮಾನ ನೀಡಿಕೆ ಎಂಬ ವಂಚನೆ
ಈ ರೀತಿಯ ಹಗರಣಗಳಲ್ಲಿ ವ್ಯಕ್ತಿಗೆ ಇ-ಮೇಲ್ ಅಥವಾ ಎಸ್‍ಎಂಎಸ್ ರೂಪದಲ್ಲಿ ಸಂದೇಶ ಕಳುಹಿಸಿ ನಿಮಗೆ ದೊಡ್ಡ ಮೊತ್ತದ ಬಹುಮಾನ ಬಂದಿದೆ, ಆ ಮೊತ್ತ ನಿಮಗೆ ಸೇರಬೇಕಾಗಿದ್ದರೆ ನಮಗೆ ನೀವು ಕೊಂಚ ಮೊತ್ತದ ಕಮಿಷನ್ ನೀಡಬೇಕು ಎಂದು ಮನವಿ ಮಾಡಲಾಗುತ್ತದೆ. ಇದನ್ನು ನಂಬಿ ಕಮಿಷನ್ ಮೊತ್ತವನ್ನು ಹಾಕಿದರೆ ವಂಚಕರು ನಾಪತ್ತೆಯಾಗುತ್ತಾರೆ ಇಲ್ಲವೇ ಇನ್ನಷ್ಟು ಕಮಿಷನ್ ಮೊತ್ತ ನೀಡಿ ಎಂದು ಪುನಃ ಸಂದೇಶ ಕಳುಹಿಸುತ್ತಾರೆ.
ಈ ರೀತಿ ಅಮಾಯಕರು ಈ ವಂಚನೆಯ ಜಾಲದಲ್ಲಿ ಸಿಲುಕಿ ತಮ್ಮ ಅಪಾರ ಹಣ ಕಳೆದುಕೊಂಡ ಉದಾಹರಣೆಗಳು ಅನೇಕವಿವೆ. ಈ ಬಗೆಯಲ್ಲಿ ದಿಢೀರ್ ಅಧಿಕ ಮೊತ್ತ ಪಡೆಯುವ ಆಸೆಗೆ ಬಿದ್ದು ಮೋಸ ಹೋಗಿರುವ ಅಸಂಖ್ಯ ವ್ಯಕ್ತಿಗಳಿದ್ದಾರೆ. ಈ ರೀತಿಯ ವಂಚನೆಗಳು ಸಾಮಾನ್ಯವಾಗಿ ಹೊರದೇಶಗಳ ಸ್ಥಳಗಳಿಂದ ಆಗುತ್ತವೆ.
ಇವುಗಳಿಗೆ ಮುಂಜಾಗ್ರತಾ ಕ್ರಮ ಏನೆಂದರೆ ಈ ಬಗೆಯ ಕರೆಗಳಿಗೆ ಮತ್ತು ಅನಾಮಧೇಯ ಕರೆಗಳಿಗೆ ಉತ್ತರಿಸಲೇಬಾರದು ಹಾಗೂ ಕಂಪ್ಯೂಟರ್‍ಗಳು ಹಾಗೂ ಇ-ಮೇಲ್‍ಗಳಲ್ಲಿ SPಂಒ ಫಿಲ್ಟರ್ ಸೆಟ್ಟಿಂಗ್‍ಗಳ ಬದಲಾವಣೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಂಚಕರ ಖಾತೆಗೆ ಹಣ ವರ್ಗಾಯಿಸಲೇಬಾರದು. ಲಾಟರಿಯಲ್ಲಿ ಬಹುಮಾನ ಬಂದಿದೆ, ಅಧಿಕ ಮೊತ್ತದ ಹಣ ನೀಡುತ್ತೇವೆ, ಇದಕ್ಕೆ ಕಮಿಷನ್ ಕೊಡಿ ಮುಂತಾದ ವಂಚಕರ ಪ್ರಲೋಭನೆಗಳಿಗೆ ಈಡಾಗಲೇಬಾರದು.
ಯಾವುದೇ ಕಾರಣಕ್ಕೂ ಇಂಥವರ ಜೊತೆ ವೈಯಕ್ತಿಕ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಬಾರದು. ಒಂದುವೇಳೆ ಇಂಥವರಿಂದ ಮೋಸ ಹೋಗಿದ್ದರೆ ಇತ್ತೀಚಿನ 6 ತಿಂಗಳ ಬ್ಯಾಂಕ್ ವ್ಯವಹಾರಗಳ ಸ್ಟೇಟ್‍ಮೆಂಟ್, ವಂಚಕರು ಕಳುಹಿಸಿದ ಎಸ್‍ಎಂಎಸ್ ವಿವರ, ಐಡಿ ದಾಖಲೆ ಮತ್ತು ವಿಳಾಸ ದಾಖಲೆ ಪಡೆದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಬೇಕು.
(೨) ಉದ್ಯೋಗ ವಂಚನೆ
ಉದ್ಯೋಗದ ನಿರೀಕ್ಷೆಯಲ್ಲಿರುವವರು ಅಥವಾ ಈಗಾಗಲೇ ಉದ್ಯೋಗದಲ್ಲಿದ್ದು ಹೆಚ್ಚಿನ ವೇತನ ಬಯಸುವಂಥವರನ್ನೇ ಗುರಿಯಾಗಿಸಿ ಈ ರೀತಿಯ ವಂಚನೆಗಳನ್ನೆಸಗಲಾಗುತ್ತದೆ. ಉದ್ಯೋಗಕ್ಕಾಗಿ ಹತಾಶ ಯತ್ನದಲ್ಲಿರುವಂಥವರಿಗೆ ಹೆಚ್ಚಿನ ವೇತನದ ಆಕರ್ಷಣೆ ತೋರಿಸಿ “ನಿಮಗೆ ಕಾಯಂ ಉದ್ಯೋಗ ಒದಗಿಸಿಕೊಡುತ್ತೇವೆ, ಅನುಕೂಲಕರ ಅವಧಿಯಲ್ಲಿ ಕೆಲಸ ಮಾಡಬಹುದು, ಆಕರ್ಷಕ ವೇತನ ನೀಡಲಾಗುವುದು. ಕಾಯಂ ಉದ್ಯೋಗ ಮತ್ತು
ಇತರ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು” ಎಂದು ಆಮಿಷ ಒಡ್ಡುತ್ತಾರೆ. “ನಿಮಗೆ ಇಂಥ ಕೆಲಸ ಬೇಕೆಂದರೆ ಭದ್ರತಾ ಠೇವಣಿ ಮತ್ತು ನೋಂದಣಿ ಶುಲ್ಕವಾಗಿ ಇಂತಿಷ್ಟು ಮೊತ್ತವನ್ನು ನಮ್ಮ ಖಾತೆಗೆ ಹಾಕಿ” ಎಂದು ಹೇಳುತ್ತಾರೆ.
ಜನರು ತಿಳಿದುಕೊಳ್ಳ ಬೆ ೀಕಾಗಿರುವುದೇನೆಂದರೆ ಯಾರೂ ಮುಖಾಮುಖಿ ಸಂದರ್ಶನ ನಡೆಸದೆ ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ. ಯಾವುದೇ ಕಂಪನಿಗಳು ಹಣ ಪಡೆದು ಸಂದರ್ಶನ ಇತ್ಯಾದಿಗಳನ್ನು ನಡೆಸುವುದಿಲ್ಲ. ಆದ್ದರಿಂದ ಇಂಥ ಸಂದೇಶಗಳು ಬಂದರೆ ಕಂಪನಿ ಅಧಿಕೃತವೇ ಎಂಬುದನ್ನು ಮೊದಲು ಖಾತರಿಪಡಿಸಿಕೊಳ್ಳಬೇಕು. ಹೊರದೇಶಗಳಿಗೆ ಕಳುಹಿಸುತ್ತೇವೆ ಮುಂತಾಗಿ ಹೇಳುತ್ತಿದ್ದರೆ ಕಂಪನಿ ಬಗ್ಗೆ ಸರ್ಚ್ ಮಾಡಿ ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.
(೩) ವಧೂ-ವರರ (ಮ್ಯಾಟ್ರಿಮೊನಿ) ಹಗರಣ
ಇದರಲ್ಲಿ ವಂಚಕರು ಪ್ರಮುಖ ವಧೂವರಾನ್ವೇಷಣೆ ವೆಬ್‍ಸೈಟ್‍ಗಳನ್ನು ಬಳಸಿ ನಕಲಿ ವ್ಯಕ್ತಿ ವಿವರಗಳನ್ನು ಸೃಷ್ಟಿಸುತ್ತಾರೆ. ಈ ರೀತಿ ಪರಿಚಯವಾದವರ ಬಳಿ ಹಣ ಕಳುಹಿಸುವಂತೆ ಬೇಡಿಕೆ ಇಡುತ್ತಾರೆ. ಈ ರೀತಿ ಆದಲ್ಲಿ ಅಂಥವರ ವಿಶ್ವಾಸಾಹರ್ತೆಯನ್ನು ದೃಢಪಡಿಸಿಕೊಳ್ಳಬೇಕು. ಅಧಿಕೃತ ವೆಬ್‍ಸೈಟ್‍ಗಳಲ್ಲಷ್ಟೇ ವಧೂವರಾನ್ವೇಷಣೆ ಮಾಡಬೇಕು.
ಆನ್‍ಲೈನ್‍ನಲ್ಲಿ ಚರ್ಚೆಯಾದ ಬಳಿಕ ಒಂದಲ್ಲ ಹಲವಾರು ಸಲ ಖುದ್ದಾಗಿ ಸಂಬಂಧಿತ ವಧೂ-ವರರನ್ನು ಮತ್ತು ಅವರ ಕುಟುಂಬದವರನ್ನು ಭೇಟಿಯಾಗಿ ಅವರ ವಿವರಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಬ್ಯಾಂಕ್ ವ್ಯವಹಾರದ ವಿವರಗಳನ್ನು ಬಹಿರಂಗಪಡಿಸಬಾರದು. ಆ ವ್ಯಕ್ತಿ ಕೆಲಸ ಮಾಡುತ್ತಿರುವ ಕಡೆ ಒಮ್ಮೆ ಭೇಟಿ ನೀಡಿ ಆ ವ್ಯಕ್ತಿಯ ವಿವರಗಳು ವಿಶ್ವಾಸಾರ್ಹವೇ ಎಂಬುದು ದೃಢವಾದ ಬಳಿಕವಷ್ಟೇ ಮುಂದುವರಿಯಬೇಕು.
(೪) ಸಾಲದ ವಂಚನೆ
ಇದರಲ್ಲಿ ವಂಚಕ ವ್ಯಕ್ತಿಗಳು ಸಾಲವನ್ನು ಹುಡುಕುತ್ತಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಭಾರಿ ಮೊತ್ತದ ಸಾಲ ಕೊಡಿಸುವುದಾಗಿ ಆಮಿಷವೊಡ್ಡುತ್ತಾರೆ.
ವಂಚಕರು ಫೆÇೀನ್ ಕರೆ ಅಥವಾ ಎಸ್‍ಎಂಎಸ್ ಅಥವಾ ಇ-ಮೇಲ್ ಸಂದೇಶದ ಮೂಲಕ ನಿಮ್ಮನ್ನು ಸಂಪರ್ಕಿಸಿ ಸಾಲ ಕೊಡಿಸುವುದಾಗಿ ಹೇಳುತ್ತಾರೆ.
ಅವರು ತಮ್ಮನ್ನು ಪ್ರತಿಷ್ಠಿತ ಬ್ಯಾಂಕ್‍ಗಳ ಅಧಿಕಾರಿಗಳು, ಪ್ರತಿನಿಧಿಗಳು ಇಲ್ಲವೇ ಏಜೆಂಟರ ಸೋಗಿನಲ್ಲಿ ನಿಮಗೆ ಪರಿಚಯ ಮಾಡಿಕೊಳ್ಳುತ್ತಾರೆ.
ಅವರು ನೀವು ವಿಶೇಷ ಸಾಲಕ್ಕೆ ಅರ್ಹರಾಗಿದ್ದು ನಿಮಗೆ ಸುಲಭ ಮರುಪಾವತಿಯ, ಅತಿಕಡಿಮೆ ಬಡ್ಡಿದರದ ಅಧಿಕ ಮೊತ್ತದ ಸಾಲ ಕೊಡಿಸುವುದಾಗಿ ಮಾಹಿತಿ ನೀಡುತ್ತಾರೆ.
ನೀವು ಸಾಲ ಪಡೆಯಲು ಒಪ್ಪಿದರೆ ಅವರು ಇ-ಮೇಲ್ ಅಥವಾ ವಾಟ್ಸ್‍ಆ್ಯಪ್‍ನಂಥ ಆನ್‍ಲೈನ್ ಮಾಧ್ಯಮದ ಮೂಲಕ ನಿಮ್ಮ ಐಡಿ ಮತ್ತು ವಿಳಾಸ ಪುರಾವೆ, ಪಾನ್ (Pಂಓ) ಸಂಖ್ಯೆ, ಬ್ಯಾಂಕ್ ಖಾತೆಯ ವಿವರಗಳು, ಅಕೌಂಟ್ ಸ್ಟೇಟ್‍ಮೆಂಟ್, ರದ್ದಾದ ಚೆಕ್‍ನ ಪ್ರತಿ ಮುಂತಾದ ನಿಮ್ಮ ದಾಖಲೆಗಳ ಸಾಫ್ಟ್ ಕಾಪಿಯನ್ನು ಪಡೆದುಕೊಳ್ಳುತ್ತಾರೆ. ಈ ದಾಖಲೆಗಳಲ್ಲಿ ಕೆಲವನ್ನು ವಂಚಕರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಇದಾದ ಬಳಿಕ ವಂಚಕರು ನಿಮಗೆ ಸಾಲದ ಅರ್ಜಿ ನಮೂನೆಯನ್ನು ಕಳುಹಿಸುತ್ತಾರೆ ಮತ್ತು ನೀವು ಅದನ್ನು ಭರ್ತಿಮಾಡಿ ಸ್ಕ್ಯಾನ್ ಮಾಡಿದ ಸಾಫ್ಟ್ ಕಾಪಿಯನ್ನು ಕಳುಹಿಸಬೇಕೆಂದು ಕೋರುತ್ತಾರೆ ಹಾಗೂ ನಿಮ್ಮ ಸಾಲ ಕೆಲವೇ ದಿನಗಳಲ್ಲಿ ಮಂಜೂರಾಗಲಿದೆ ಎಂದು ತಿಳಿಸುತ್ತಾರೆ.
ಅರ್ಜಿ ನಮೂನೆ ಕಳುಹಿಸಿದ ಬಳಿಕ ಅವರು ಇಂಥ ಬ್ಯಾಂಕ್/ಹಣಕಾಸು ಸಂಸ್ಥೆಯ ವಿಶ್ವಾಸಾರ್ಹ ದಾಖಲೆಯಂತೆಯೇ ಕಾಣುವ ಸಾಲ ಮಂಜೂರಾತಿ ಪತ್ರದ ಸಾಫ್ಟ್ ಕಾಪಿಯನ್ನು ಕಳುಹಿಸುತ್ತಾರೆ. ತರುವಾಯ ಫೈಲ್‍ಶುಲ್ಕಗಳು, ಮರುಪಾವತಿಯೋಗ್ಯ ಭದ್ರತಾ ಮೊತ್ತ, ಪರಿಷ್ಕರಣಾ ಶುಲ್ಕ ಇತ್ಯಾದಿಗಳಿಗಾಗಿ ಒಂದು ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಕಳುಹಿಸುವಂತೆ ನಿಮ್ಮನ್ನು ಕೇಳಲಾರಂಭಿಸುತ್ತಾರೆ.
ಮುಂಜಾಗ್ರತಾ ಕ್ರಮಗಳು
ಕಂಪನಿ ವಿಶ್ವಾಸಾರ್ಹವೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು.
ಆ ಕಂಪನಿಗೆ ಖುದ್ದಾಗಿ ಭೇಟಿನೀಡಿ ಪರಿಶೀಲಿಸಬೇಕು.
ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಸಾಲ ಮಂಜೂರಾತಿಗಾಗಿ ಶುಲ್ಕಗಳನ್ನು ಕಟ್ಟಲು ಕೇಳುವುದಿಲ್ಲ ಎಂಬ ವಿಚಾರ ಅರಿತಿರಬೇಕು.
(೫) ಒಟಿಪಿ ವಂಚನೆಗಳು
ಒನ್‍ಟೈಮ್ ಪಾಸ್‍ವರ್ಡ್ (ಒಟಿಪಿ) ಒನ್‍ಟೈಮ್ ಪಿನ್ ಎಂದೂ ಪರಿಚಿತವಾಗಿದ್ದು, ಒಂದು ಕಂಪ್ಯೂಟರ್ ಸಿಸ್ಟಂ ಅಥವಾ ಇತರ ಡಿಜಿಟಲ್ ಉಪಕರಣಗಳ ಮೇಲೆ ಒಂದೇ ಒಂದು ಲಾಗ್‍ಇನ್ ಸೆಷನ್ ಅಥವಾ ವ್ಯವಹಾರಕ್ಕೆ ಮಾತ್ರ ಸಿಂಧುವಾಗಿರುವ ಒಂದು ಪಾಸ್‍ವರ್ಡ್ ಆಗಿದೆ. ಒಟಿಪಿಗಳು ಸಾಂಪ್ರದಾಯಿಕ (Sಣಚಿಣiಛಿ) ಪಾಸ್‍ವರ್ಡ್ ಆಧರಿತ ಅಧಿಕೃತತೆಯೊಂದಿಗೆ ಸಂಬಂಧಿಸಿದ ನ್ಯೂನತೆಗಳನ್ನು ನಿವಾರಿಸುತ್ತವೆ.
ನಮ್ಮ ಖಾತೆಯಿಂದ ದುಡ್ಡು ತೆಗೆಯಲು ಅಪರಾಧಿಗಳು ಆನ್‍ಲೈನ್ ವಹಿವಾಟಿನಿಂದ ಸುಮ್ಮಸುಮ್ಮನೆ ಬ್ಯಾಂಕ್‍ನಿಂದ ದೂರವಾಣಿ ಕರೆ ಮಾಡುತ್ತಿದ್ದೇವೆ, ಸಂಬಂಧಪಟ್ಟ ಬ್ಯಾಂಕಿಗೆ ಬೇಕಾಗಿದೆ ಎಂದು ಎಲ್ಲಾ ವಿವರಗಳನ್ನು ಪಡೆಯುತ್ತಾರೆ. ನಿಮ್ಮ ಮೊಬೈಲ್‍ಗೆ ಈಗ ಒಟಿಪಿ ನಂಬರ್ ಬಂದಿದೆ, ಆ ಒಟಿಪಿಯನ್ನು ಷೇರ್ ಮಾಡಿ ಎನ್ನುತ್ತಾರೆ. ಒಂದು ವೇಳೆ ವಂಚಿತ ವ್ಯಕ್ತಿ ತನ್ನ ವಿವರ ನೀಡಿದಲ್ಲಿ ಆತನ ಖಾತೆಯಲ್ಲಿದ್ದ ಹಣವೆಲ್ಲವನ್ನೂ ತೆಗೆದುಕೊಂಡುಬಿಡುತ್ತಾರೆ.
ಇಂಥ ಕರೆಗಳು ಬಂದಾಗ ಯಾರಿಗೂ ಒಟಿಪಿ, ಎಟಿಎಂ ಪಿನ್ ನಂಬರ್‍ಗಳನ್ನು ತಿಳಿಸಬಾರದು. ಒಂದು ವಿಷಯ ಗಮನಿಸಬೇಕು. ಯಾವುದೇ ಬ್ಯಾಂಕ್ ತನ್ನ ಖಾತೆದಾರರಿಗೆ ಸಿವಿವಿ, ಒಟಿಪಿ, ಎಟಿಎಂ ಪಿನ್ ಇವ್ಯಾವುವನ್ನೂ ಕೇಳುವುದಿಲ್ಲ. ಆ ರೀತಿ ಕೇಳಿ ಕರೆ ಬಂದರೆ ಅದು ವಂಚನೆಯ ಕರೆಯೇ ಎಂದು ತಿಳಿಯಬೇಕು. ವಿವರಗಳನ್ನು ಬಹಿರಂಗಪಡಿಸಬಾರದು.
ಒಚಿದುವೇಳೆ ನೀವು ಮೊಬೈಲ್‍ನಲ್ಲಿ ಟ್ರೂ ಕಾಲರ್ ಆ್ಯಪ್ ಏನಾದರೂ ಇನ್‍ಸ್ಟಾಲ್ ಮಾಡಿದ್ದರೆ ಅದರಲ್ಲಿ ಮೊಬೈಲ್ ಕರೆ ಸ್ವೀಕರಿಸುವಾಗ ಬ್ಯಾಂಕ್ ಮ್ಯಾನೇಜರ್ ಅಥವಾ ಬ್ಯಾಂಕಿನ ಹೆಸರು ಇತ್ಯಾದಿಗಳು ಬಂದರೂ ಅದನ್ನು ನಂಬಬಾರದು.
ನಾವು ಮಾಡಬೇಕಿರುವುದೇನೆಂದರೆ ಆ ವ್ಯಕ್ತಿಗೆ ನಮ್ಮ ಮಾತೃಭಾಷೆಯಲ್ಲಿ ಮಾತನಾಡುವಂತೆ ಸೂಚಿಸಬೇಕು ಮತ್ತು ಹಲವಾರು ಪ್ರಶ್ನೆಗಳನ್ನು ಕೇಳಿ ಆ ವ್ಯಕ್ತಿ ಮ್ಯಾನೇಜರ್ ಹೌದೋ ಅಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಇಂಥ ವ್ಯಕ್ತಿಗಳು ಐಡಿ ನೀಡಿ ಎಟಿಎಂ ಕಾರ್ಡ್‍ಗಳನ್ನು ಪಡೆದಿರುತ್ತಾರೆ. ನಾವು ವಿವರಗಳನ್ನು ನೀಡಿದ ತತ್‍ಕ್ಷಣ ಹಣ ಪಡೆದು ಸಿಮ್‍ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿಬಿಡುತ್ತಾರೆ.
(೬) ಆನ್‍ಲೈನ್ ಕ್ಲಾಸಿಫೈಡ್ ವಂಚನೆ
ಇದರಲ್ಲಿ ವಂಚಕ ಅಸ್ತಿತ್ವದಲ್ಲೇ ಇರದ ವಾಹನ ಮಾರಾಟಕ್ಕಿದೆ ಎಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸುತ್ತಾನೆ. ಐಷಾರಾಮಿ ವಾಹನವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದಾಗಿ ವೆಬ್‍ಸೈಟ್‍ನಲ್ಲಿ ಜಾಹೀರಾತು ಹಾಕುತ್ತಾನೆ.
ಫೆÇೀಟೋಗಳು, ವಿವರಗಳು, ಡಿಸ್ಕ್ರಿಪ್ಷನ್ ಅನ್ನು ಆತನು ಒಎಲ್‍ಎಕ್ಸ್ ಡಾಟ್‍ಕಾಮ್, ಕ್ವಿಕ್ಕರ್ ಡಾಟ್ ಕಾಮ್, ಕಾರ್ಸ್ ಡಾಟ್ ಕಾಮ್, ಆಟೋ ಟ್ರೇಡರ್ಸ್ ಡಾಟ್ ಕಾಮ್ ಇತ್ಯಾದಿಗಳಿಂದ ತೆಗೆದುಕೊಂಡಿರುತ್ತಾನೆ. ಈ ರೀತಿ ಕಡಿಮೆ ಬೆಲೆ ಆಮಿಷದಿಂದ ಗ್ರಾಹಕರು ಚೌಕಾಸಿಗೆ ಮುಂದಾಗುತ್ತಾರೆ. ಆಗ ವಂಚಕನು ವಾಹನ ಹೊರದೇಶದಲ್ಲಿದೆ, ಹಡಗಿನಲ್ಲಿ ಬರುತ್ತಿದೆ ಇತ್ಯಾದಿಯಾಗಿ ಸುಳ್ಳು ಹೇಳುತ್ತಾನೆ. ಬಳಿಕ ಗ್ರಾಹಕರಿಗೆ ಹಣವನ್ನು ಕಳುಹಿಸುವಂತೆ, ಅನಂತರ ವಾಹನವನ್ನು ಕಳುಹಿಸಿ ಕೊಡುವುದಾಗಿ ತಿಳಿಸುತ್ತಾನೆ.
ವಹಿವಾಟು ವಿಶ್ವಾಸಾರ್ಹ ಎಂದು ನಂಬಿಸಲು ವಂಚಕನು ಏಜೆಂಟನೊಬ್ಬನಿಗೆ ಹಣ ಪಾವತಿಸುವಂತೆ ಗ್ರಾಹಕರಿಗೆ ತಿಳಿಸುತ್ತಾನೆ. ಬಳಿಕ ನಾಪತ್ತೆಯಾಗುತ್ತಾನೆ. ಆಮೇಲಷ್ಟೇ ಗ್ರಾಹಕರಿಗೆ ತಾವು ವಂಚನೆಗೊಳಗಾಗಿರುವುದು ತಿಳಿಯುತ್ತದೆ.
ಈ ರೀತಿ ಪೆÇೀಸ್ಟಿಂಗ್ ಇದ್ದರೆ ಖುದ್ದಾಗಿ ಆರ್‍ಟಿಓಗೆ ಭೇಟಿನೀಡಿ ಆ ವಾಹನ ನೋಡಿಕೊಂಡು ಆರ್‍ಟಿಓಗೆ ಆ ವಾಹನದ ವಿವರಗಳನ್ನು ನೀಡಿ ಬಳಿಕ ವ್ಯವಹಾರ ಮುಂದುವರಿಸುವುದು ಒಳಿತು.
ವಾಹನಗಳು ಮಾತ್ರವಲ್ಲ, ಇತರ ಅನೇಕ ವಸ್ತುಗಳ ಬಗ್ಗೆ ಕೂಡ ನಕಲಿ ಜಾಹೀರಾತುಗಳನ್ನು ನೀಡಿ ವಂಚನೆ ಎಸಗುತ್ತಿರುತ್ತಾರೆ. ಆದ್ದರಿಂದ ಯಾವುದೇ ಪರಿಶೀಲನೆ ಇಲ್ಲದೆ ವ್ಯವಹಾರ ಮಾಡತಕ್ಕದ್ದಲ್ಲ. ಇವುಗಳಲ್ಲಿ ಕಳುವಾದ ಸಾಮಗ್ರಿಗಳೂ ಇರುವ ಸಾಧ್ಯತೆ ಇದೆ.
(೭) ಕ್ರಿಪೆÇ್ಟೀ ಕರೆನ್ಸಿ ವಂಚನೆ
ಕ್ರಿಪೆÇ್ಟೀ ಕರೆನ್ಸಿಯ ವಂಚನೆ ಹೇಗಿರುತ್ತದೆ ಎಂದರೆ ಗ್ರಾಹಕರಿಗೆ ಬಿಟ್ ಕಾಯಿನ್ ರೂಪದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಯಾರಿಗೂ, ಯಾವುದೇ ಸಂಸ್ಥೆಗೂ ವರ್ಚುವಲ್ ಕರೆನ್ಸಿಯ ರೂಪದಲ್ಲಿ ಹಣ ದ್ವಿಗುಣಗೊಳಿಸುವ ಪ್ರಕ್ರಿಯೆಗೆ ಪರವಾನಗಿ ಅಥವಾ ಅನುಮತಿ ನೀಡಿರುವುದಿಲ್ಲ.
ಕಾನೂನು ಕಾರ್ಯಚೌಕಟ್ಟಿನ ಅನುಪಸ್ಥಿತಿಯಲ್ಲಿ ನಾಗರಿಕರಿಗೆ ಬಿಟ್ ಕಾಯಿನ್‍ನಂತಹ ವರ್ಚುವಲ್ ಕರೆನ್ಸಿಯ ರೂಪದಲ್ಲಿ ವಹಿವಾಟು ನಡೆಸುವುದು ಯುಕ್ತವಲ್ಲ. ಈ ಕರೆನ್ಸಿಗಳನ್ನು ಡಾರ್ಕ್‍ವೆಬ್ ಅಥವಾ ಮರೆಮಾಚಿದ ವೆಬ್‍ನಲ್ಲಿ ಕಾರ್ಯಾಚರಿಸುವ ಕ್ರಿಮಿನಲ್‍ಗಳು ಸಾಧಾರಣವಾಗಿ ಬಳಸುತ್ತಾರೆ. ಕಾನೂನುಬದ್ಧ, ವಿಶ್ವಾಸಾರ್ಹ ಉದ್ದಿಮೆಗಳು ಸಾಮಾನ್ಯವಾಗಿ ಬಿಟ್‍ಕಾಯಿನ್‍ಗಳನ್ನು ಉಪಯೋಗಿಸುವುದಿಲ್ಲ. ಆದ್ದರಿಂದ ಬಿಟ್‍ಕಾಯಿನ್ಸ್ ರೂಪದಲ್ಲಿ ಯಾವುದೇ ವ್ಯವಹಾರಕ್ಕೆ ಮನವಿ ಬಂದರೆ ಸಂದೇಹಪಡಬೇಕು ಮತ್ತು ಅದನ್ನು ನಿವಾರಿಸಬೇಕು. ವಿವಿಧ ಪೆÇೀರ್ಟಲ್‍ಗಳಲ್ಲಿ ಬಿಟ್‍ಕಾಯಿನ್‍ಗಳ ಮೂಲಕ ವ್ಯವಹರಿಸುತ್ತಿರುವ ಮತ್ತು ಇತರ ಕ್ರಿಪೆÇ್ಟೀ ಕರೆನ್ಸಿಗಳನ್ನು ಬಳಸುತ್ತಿರುವ ಜನರು ಬಿಟ್ ಕಾಯಿನ್‍ಗಳನ್ನು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಅತಿ ಎಚ್ಚರಿಕೆಯಿಂದಿರಬೇಕು. ಏಕೆಂದರೆ ನಿಮಗೆ ನಕಲಿ ಗುರುತುಗಳನ್ನು ನೀಡಿ ವಂಚಿಸುವ ವಂಚಕರು ಎಲ್ಲೆಲ್ಲೂ ಇದ್ದಾರೆ.
ಇವರ ನಿವಾರಣೆಗೆ ಒಂದುವೇಳೆ ಈ ರೀತಿ ವಂಚನೆಗೊಳಗಾಗಿದ್ದರೆ ಪೆÇಲೀಸ್ ಠಾಣೆಗೆ ತೆರಳಿ ದೂರು ನೀಡಿ ಪೆÇಲೀಸರಿಗೆ ವಿವರ ನೀಡಿ ಬಿಟ್‍ಕಾಯಿನ್‍ನಲ್ಲಿ ಒಳಗೊಂಡಿರುವ ಮೊತ್ತ, ಯಾರಿಂದ ಅದರ ಖರೀದಿ ಅಥವಾ ಮಾರಾಟ ನಡೆದಿದೆಯೋ ಅದರ ಬಗ್ಗೆ ಮಾಹಿತಿ ನೀಡಬೇಕು.
(೮) ಲೈಂಗಿಕ ಸುಲಿಗೆ ಹಗರಣಗಳು
ಕೊರೋನಾ ಬಂದು ಲಾಕ್‍ಡೌನ್ ಆದ ಬಳಿಕ ಕೆಲಸ ಕಳೆದುಕೊಂಡ ಬಹಳಷ್ಟು ಜನ ಆ ರೀತಿಯ ವಂಚನೆಗೆ ಬಲಿಯಾಗುತ್ತಿದ್ದಾರೆ. ವಾರದಲ್ಲಿ ಹತ್ತಾರು ಜನ ಈ ವಂಚನೆಗೆ ಗುರಿಯಾಗಿ ಪೆÇಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಾರೆ. ಈ ರೀತಿಯ ವಂಚನೆ ಎಸಗುವ ಬೃಹತ್ ಕಾರ್ಯಜಾಲವೇ ಇದೆ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದ ಡೇಟಿಂಗ್ ಆ್ಯಪ್‍ಗಳಲ್ಲಿ ಪರಿಚಯ ಮಾಡಿಕೊಂಡು ಮೊಬೈಲ್ ನಂ., ಫೇಸ್‍ಬುಕ್, ಇನ್‍ಸ್ಟಾಗ್ರಾಂ, ವಾಟ್ಸ್‍ಆ್ಯಪ್‍ಗಳಲ್ಲಿ ವಿಡಿಯೋಕಾಲ್ ಮಾಡುತ್ತಾರೆ. ಸಾಮಾನ್ಯವಾಗಿ ಅವರು ಹುಡುಗಿಯರ ಪೆÇ್ರಫೈಲ್, ಫೆÇೀಟೋಗಳನ್ನು ಅಪ್‍ಲೋಡ್ ಮಾಡಿರುತ್ತಾರೆ. ಈ ರೀತಿ ಲೈಂಗಿಕ ಸಂಭಾಷಣೆಗಳನ್ನು ನಡೆಸಿ ನಿಮ್ಮೊಂದಿಗೆ ವಿಡಿಯೋ ಕಾಲ್‍ಗಳನ್ನು ಮಾಡುವ ಇಚ್ಛೆ ಇರುವುದಾಗಿ ಹೆಣ್ಣು ಮಕ್ಕಳಿಂದ ವಿಡಿಯೋ ಕಾಲ್‍ಗಳನ್ನು ಮಾಡಿಸುತ್ತಾರೆ. ಆ ವ್ಯಕ್ತಿ ಒಪ್ಪಿಕೊಂಡ ಬಳಿಕ ಆ ಯುವತಿ ಪೂರ್ತಿ ಬಟ್ಟೆ ಕಳಚಿ ನಗ್ನಳಾಗುತ್ತಾಳೆ. ಇವನಿಗೂ ನಗ್ನನಾಗಲು ಸೂಚಿಸುತ್ತಾಳೆ. ಆ ವ್ಯಕ್ತಿಗೆ ತಿಳಿಯದಂತೆ ಸ್ಕ್ರೀನ್ ರೆಕಾರ್ಡಿಂಗ್ ಅಪ್ಲಿಕೇಷನ್ ಅನ್ನು ಬಳಸಿ ವಾಟ್ಸ್ ಆ್ಯಪ್‍ನ ವಿಡಿಯೋ ಕಾಲ್‍ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಅದಾದ ಸ್ವಲ್ಪಹೊತ್ತಿನ ಬಳಿಕ ಆ ವ್ಯಕ್ತಿಗೆ ವೀಡಿಯೋ ಕಳುಹಿಸಿ ಇದನ್ನು ಬಹಿರಂಗಪಡಿಸದಿರಬೇಕಾದರೆ ಗೂಗಲ್‍ಪೇ, ಫೆÇೀನ್‍ಪೇ ಇತ್ಯಾದಿಗಳ ಮೂಲಕ ಹಣ ಕಳುಹಿಸುವಂತೆ, ಆಮೇಲೆ ವಿಡಿಯೋವನ್ನು ಡಿಲೀಟ್ ಮಾಡಲಾಗುವುದು ಎಂದು ಬ್ಲ್ಯಾಕ್‍ಮೇಲ್ ಮಾಡುತ್ತಾರೆ.
ಒಂದು ವೇಳೆ ಆ ವ್ಯಕ್ತಿ ಹೆದರಿ ಹಣ ಪಾವತಿಸಿದನೆಂದರೆ ಮಿಕ ಬಲೆಗೆ ಬಿದ್ದಂತೆಯೇ ಸರಿ. ಹಾಗಾದಾಗ ಅವನನ್ನು ಪದೇ ಪದೇ ಬೆದರಿಸಿ ಲಕ್ಷಾಂತರ ರೂ. ಹಣ ಪಡೆದುಕೊಳ್ಳುತ್ತಾರೆ.
ತರುವಾಯ ಫೇಸ್‍ಬುಕ್‍ನಿಂದ ಆ ವ್ಯಕ್ತಿಯ ಫೆÇೀಟೋಗಳು ಇತ್ಯಾದಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಆ ವ್ಯಕ್ತಿಯ ಬಂಧು-ಮಿತ್ರರಿಗೆಲ್ಲಾ ವಿಡಿಯೋ ಕಳುಹಿಸುವುದಾಗಿ ಬೆದರಿಸತೊಡಗುತ್ತಾರೆ.
ಬಳಿಕ ಅವರ ತಂಡದಲ್ಲೇ ಇರುವ ನಕಲಿ ಪೆÇಲೀಸರಿಂದ ಕರೆ ಮಾಡಿಸುತ್ತಾರೆ. ಆ ಮೂಲಕವೂ ಸುಲಿಗೆ ಮಾಡುತ್ತಾರೆ. ಸೆಟ್ಲ್‍ಮೆಂಟ್ ಮಾಡಲು ಆನ್‍ಲೈನ್‍ನಿಂದ ದುಡ್ಡು ಹಾಕಲು ಒತ್ತಡ ಹೇರುತ್ತಾರೆ.
ಕೆಲವು ಘಟನೆಗಳು ಹೀಗೂ ನಡೆದಿರುವುದುಂಟು: ಅನಾಮಧೇಯ ಸಂಖ್ಯೆಯಿಂದ ವಾಟ್ಸ್‍ಆ್ಯಪ್ ವಿಡಿಯೋಕಾಲ್ ಮಾಡಿ ನೋಡನೋಡುತ್ತಿದ್ದಂತೆಯೇ ಕರೆ ಮಾಡಿದ ಯುವತಿ ಬೆತ್ತಲಾಗಿಬಿಡುತ್ತಾಳೆ. ಬಳಿಕ ಆ ವಿಡಿಯೋವನ್ನು ರೆಕಾರ್ಡ್ ಮಾಡಿ ಆತನಿಗೆ ಕಳುಹಿಸಿ ಹಣ ನೀಡುವಂತೆ, ಇಲ್ಲದಿದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಾರೆ. ಮರ್ಯಾದೆಗೆ ಅಂಜಿದ ವ್ಯಕ್ತಿಗಳು ಬೇರೆ ದಾರಿ ಕಾಣದೆ ಹಣ ನೀಡುತ್ತಾರೆ. ಈ ರೀತಿಯ ಕಿರುಕುಳ ಸಹಿಸದೆ ಅನೇಕ ವ್ಯಕ್ತಿಗಳು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವುದುಂಟು.
ಸಾಮಾನ್ಯವಾಗಿ ಇಂಥ ವಂಚಕರು ಹದಿಹರೆಯದವರು ಮತ್ತು ನಡು ವಯಸ್ಕರನ್ನು ಟಾರ್ಗೆಟ್ ಮಾಡುತ್ತಾರೆ. ಹೀಗಾದಾಗ ಯಾವುದೇ ಕಾರಣಕ್ಕೂ ಹೆದರಬಾರದು. ತುಂಬ ಧೈರ್ಯವಾಗಿರಬೇಕು. ಮೊದಲನೆಯದಾಗಿ ಅನಾಮಧೇಯ ವಿಡಿಯೋ ಕರೆಗಳು ಬಂದರೆ ಸ್ವೀಕರಿಸಲೇಬಾರದು. ಒಂದುವೇಳೆ ಸ್ವೀಕರಿಸಿದ ಬಳಿಕ ಬೆದರಿಕೆಗೊಳಗಾದರೆ ಯಾವುದೇ ಕಾರಣಕ್ಕೂ ಹೆದರದೆ ನಿರ್ಲಕ್ಷ್ಯ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಹಣ ನೀಡಬಾರದು. ಆದಾಗ್ಯೂ ಬ್ಲ್ಯಾಕ್‍ಮೇಲ್ ಮಾಡಿದರೆ ಯಾವುದೇ ಮುಜುಗರಕ್ಕೀಡಾಗದೆ ಸೈಬರ್ ಪೆÇಲೀಸ್ ಠಾಣೆಗೆ ದೂರು ನೀಡಬೇಕು.