ಮೀಸೆ ತಿಮ್ಮಯ್ಯ ಪುತ್ಥಳಿ ಅನಾವರಣ

0
3

ಬೆಂಗಳೂರು ನಗರ ಸಂಚಾರಿ ಪೊಲೀಸ್ ಆಸ್ಪತ್ರೆ ಸಹಯೋಗದಲ್ಲಿ   ಕನ್ನಿಂಗ್  ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆ ಸಹಯೋಗದಲ್ಲಿ ನಿರ್ಮಿಸಲಾಗಿರುವ ‘ಮೀಸೆ ತಿಮ್ಮಯ್ಯ’ ಅವರ ಪುತ್ಥಳಿಯನ್ನು ಕರ್ನಾಟಕದ ಮಾನ್ಯ ಗೃಹಸಚಿವ ಶ್ರೀ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.

ಮೀಸೆ ತಿಮ್ಮಯ್ಯ ಅವರು ತಮ್ಮ ವಿಶಿಷ್ಟ ಶೈಲಿಯ ಮೀಸೆ ಮತ್ತು ಸಜ್ಜನಿಕೆಯ ನಡವಳಿಕೆಯಿಂದ ಜನಪ್ರಿಯತೆ ಗಳಿಸಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದಾಗ ವೇಗವಾಗಿ ಬಂದ ವಾಹನಕ್ಕೆ ಸಿಲುಕಲಿದ್ದ ತಾಯಿ-ಮಗಳನ್ನು ಪಾರುಮಾಡಲು ಹೋಗಿ ತಾವೇ ವಾಹನಕ್ಕೆ ಸಿಲುಕಿ ಪ್ರಾಣಾರ್ಪಣೆ ಮಾಡಿ ಹುತಾತ್ಮರಾದ ಪುಣ್ಯಜೀವಿ ಮೀಸೆ ತಿಮ್ಮಯ್ಯ. ಇದೀಗ ಅವರ ಪುತ್ಥಳಿಯನ್ನು ಅನಾವರಣ ಮಾಡುವ ಮೂಲಕ ಅವರಿಗೆ ಸೂಕ್ತ ಗೌರವ ಸಲ್ಲಿಸಲಾಗಿದೆ.