ಬಾಲಕಿಯ ರಕ್ಷಣೆ: ಸಿಬ್ಬಂದಿಗೆ ಪ್ರಶಂಸೆ

0
3

ರೈಲಿನಲ್ಲಿ ಆಕಸ್ಮಿಕವಾಗಿ ಪ್ರಯಾಣಿಸಿ ಅಪರಿಚಿತ ವ್ಯಕ್ತಿಗಳ ಮೂಲಕ ವಂಚನೆಗೆ ಗುರಿಯಾಗಬಹುದಾಗಿದ್ದ ಬಾಲಕಿಯನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಆಕೆಯನ್ನು ವಂಚಿಸಲೆತ್ನಿಸಿದ ಆರೋಪಿಗಳನ್ನು ಬಂಧಿಸಿದರು. ಈ ಒಳ್ಳೆಯ ಕೆಲಸಕ್ಕಾಗಿ ಮುಖ್ಯಪೇದೆ ಎಸ್.ಆರ್. ಅರಿಬೆಂಚಿ, ಮಹಿಳಾ ಪೊಲೀಸ್ ಪೇದೆ ಜ್ಯೋತಿಬಾಯಿ ಮತ್ತು ಗೃಹರಕ್ಷಕಿ ಚಂದ್ರಕಲಾ ಅವರಿಗೆ ನಗರ ಪೊಲೀಸ್ ಆಯುಕ್ತ ಶ್ರೀ ಭಾಸ್ಕರರಾವ್ ಐಪಿಎಸ್ ರವರು ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದರು.