ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಐಟಿ ಸಮುದಾಯದ ಬಲ

0
3

ಬೆಂಗಳೂರು ಪೊಲೀಸರು ರಾಜ್ಯದಲ್ಲಿ ಪೊಲೀಸ್ ಲ್ಯಾಂಡ್‍ಸ್ಕೇಪ್ ಅನ್ನು ಬದಲಿಸಲು ಮಾಹಿತಿ ತಂತ್ರಜ್ಞಾನ ಸಮುದಾಯದೊಂದಿಗೆ ಕೈಜೋಡಿಸಿದ್ದಾರೆ. ಕರ್ನಾಟಕ ಪೊಲೀಸ್ ಉತ್ತಮ ಪೊಲೀಸ್ ಸೇವೆಗಾಗಿ ತಂತ್ರಜ್ಞಾನದ ಪರಿಹಾರಗಳನ್ನು ಒದಗಿಸಲು ಐಟಿ ಸಮುದಾಯದ ಬುದ್ಧಿವಂತರ ನಿರೀಕ್ಷೆಯಲ್ಲಿದೆ. ಇದಕ್ಕಾಗಿ 36 ಗಂಟೆಗಳ ಹ್ಯಾಕಥಾನ್ ಅನ್ನು ಆಯೋಜಿಸಿತ್ತು. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಯಾರಿಗೇ ಆದರೂ ಮುಕ್ತವಾಗಿರುತ್ತದೆ.

ವಿಶೇಷವಾಗಿ ವಿದ್ಯಾರ್ಥಿಗಳಿಗೆ ಐದು ಪ್ರಮುಖ ಸಮಸ್ಯೆಗಳ ನಿವಾರಣೆ (ಪತ್ತೆ) ಗಾಗಿ ಕಾರ್ಯಭಾರ ವಹಿಸಲಾಗುವುದು.

“ಈ ಚಿಂತನೆಯನ್ನು ನಾವು ಎದುರಿಸುವ ದಿನನಿತ್ಯದ ಸಮಸ್ಯೆಗಳಿಗೆ ಆವಿಷ್ಕಾರಕ ಪರಿಹಾರಗಳನ್ನು ಕಂಡುಹಿಡಿಯಲು ಮಾಡಲಾಗುತ್ತಿದೆ. ನಾವು ಐದು ಸಮಸ್ಯೆ ಹೇಳಿಕೆಗಳನ್ನು ಪಟ್ಟಿಮಾಡಿದ್ದೇವೆ. ಉದಾಹರಣೆಗೆ ಮುಖ ನೋಡಿ ಪತ್ತೆ ಹಚ್ಚುವುದು, ಕಾಣೆಯಾದ ವ್ಯಕ್ತಿಯನ್ನು  ನೆರವಿನೊಂದಿಗೆ ಪತ್ತೆ ಮಾಡುವುದು. ಇದನ್ನು ಸಾರ್ವಜನಿಕವಾಗಿ ಲಭ್ಯವಿರುವ ಭಾವಚಿತ್ರ   ನೋಡಿ ಗುರುತಿಸಬೇಕಾಗುತ್ತದೆ.

ಅಪಘಾತ ಮಾಹಿತಿ ದತ್ತಾಂಶ ವಿಶ್ಲೇಷಣಾ ವರದಿಗಾಗಿ ನಾವು ಈ  ಅಭಿಯಾನದಲ್ಲಿ ಪಾಲ್ಗೊಳ್ಳುವವರಿಗೆ ಕಳೆದ ಐದು ವರ್ಷಗಳ ಅಪಘಾತಗಳ ದತ್ತಾಂಶಗಳನ್ನು ನೀಡುತ್ತೇವೆ.. ಅಪಘಾತಗಳು ಹೇಗೆ ಮತ್ತು ಯಾಕೆ ಸಂಭವಿಸುತ್ತವೆ? ಅವುಗಳ ನಿವಾರಣೆಗೆ    ನಾವು ಮಾಡಬಹುದಾದದ್ದೇನು? ನಾವು ಮೊಬೈಲ್ ಆಧರಿತ ಬೀಟ್ (ಗಸ್ತು) ನಿರ್ವಹಣಾ ವ್ಯವಸ್ಥೆಯನ್ನು ಸಹ ನಿರೀಕ್ಷಿಸುತ್ತಿದ್ದೇವೆ. ಇದರ ಜೊತೆಗೆ ಒಂದು ಆಂತರಿಕ ಸಂವಹನ ವೇದಿಕೆ ಮುಂತಾದವುಗಳು ಸೇರಿವೆ” ಎಂದು ಪೊಲೀಸ್ ಕಂಪ್ಯೂಟರ್ ವಿಭಾಗದ ಎಸ್. ಕುಮಾರ್ ಅವರು ಹೇಳುತ್ತಾರೆ.

ಆದರೂ ಹ್ಯಾಕಥಾನ್ ಅಗತ್ಯವೇನು ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತಾರೆ.

“ಇದು ಐಟಿ ಹಿನ್ನೆಲೆಯುಳ್ಳ ಯಾರೇ ಆದರೂ ಪಾಲ್ಗೊಳ್ಳಬಹುದಾದ ಕಾರ್ಯಕ್ರಮವಾಗಿರುತ್ತದೆ ಮತ್ತು ಸಮಸ್ಯೆಯನ್ನು   ಅರ್ಥ ಮಾಡಿಕೊಳ್ಳುವವರು ನಿಗದಿತ ಸಮಯದಲ್ಲಿ ಸಮಸ್ಯೆಗೆ ಪರಿಹಾರ ಪತ್ತೆ ಮಾಡಿ ಪ್ರೋಟೋಟೈಪ್ ಒಂದನ್ನು ರೂಪಿಸಬೇಕಾಗುತ್ತದೆ. ಅದರ ಆಧಾರದಲ್ಲಿ ನಾವು ಈ ಯೋಜನೆಯ ಜಾರಿಗಾಗಿ ಒಂದು ಕಂಪನಿಗೆ ಹೊರಗುತ್ತಿಗೆ ನೀಡುತ್ತೇವೆ.”

ಒಚಿದೇ ಸಂಸ್ಥೆಯನ್ನು ಈ ಕಾರ್ಯದಲ್ಲಿ ತೊಡಗಿಸುವಲ್ಲಿ ಸೀಮಿತಗೊಳಿಸುವ ಬದಲಾಗಿ ಬಹುವಿಧದ ಆವಿಷ್ಕಾರ ಚಿಂತನೆಗಳನ್ನು ರೂಪಿಸಲು ಇದು ನೆರವು ನೀಡುತ್ತದೆ. ನೀವು ಲಭ್ಯವಿರುವ ಅತ್ಯುತ್ತಮ ಉತ್ಪನ್ನವನ್ನು ಪಡೆಯುವಿರಿ” ಎಂದು ಸಂಜಯ್ ಸಹಾಯ್ ಅವರು ಹೇಳುತ್ತಾರೆ.

“ಈ ಪರಿಹಾರಗಳನ್ನು ಅರಸಿ ನೀವು ಒಂದು ಉದ್ದಿಮೆಯನ್ನು ಸಂಪರ್ಕಿಸಿದಾಗ  ನೀವು  ಇಡೀ  ಕ್ರೋಡೀಕರಣ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಆದಾಗ್ಯೂ ಕೂಡ ನಿಮಗೆ ಒಂದು ಉತ್ತರ ಲಭಿಸದೇ ಹೋಗಬಹುದು. ಇದರಲ್ಲಿ ಹ್ಯಾಕಥಾನ್ ಪ್ರಯೋಗಾಲಯಗಳನ್ನು ಒದಗಿಸಲಾಗುತ್ತದೆ. ಅನಂತರ ಅಂತಿಮವಾಗಿ ಅವರು ನಿಮಗೆ ಪ್ರೋಟೋಟೈಪ್ ಅನ್ನು ನೀಡುತ್ತಾರೆ” ಎಂದು ಸಹಾಯ್ ಅವರು ವಿವರಿಸುತ್ತಾರೆ.

“ಪೊಲೀಸ್ ದತ್ತಾಂಶವನ್ನು ಹೊರಗಿನವರೊಂದಿಗೆ ವಿನಿಮಯ ಮಾಡಿಕೊಳ್ಳುವುದರಿಂದ ಅಪಾಯವಿಲ್ಲವೇ?” ಎಂಬ ಪ್ರಶ್ನೆಗೆ ” ಇಲ್ಲ, ಏಕೆಂದರೆ ನಾವು ಯಾವುದೇ ರಹಸ್ಯ ಮಾಹಿತಿಯನ್ನಾಗಲಿ ಅಥವಾ ನಾವು ಹೇಗೆ ಕಾರ್ಯ ನಿರ್ವಹಿಸುತ್ತೇವೆ ಎಂಬ ಅಂಶವನ್ನಾಗಲಿ ವಿನಿಮಯ ಮಾಹಿತಿಯನ್ನಷ್ಟೇ ಅವರಿಗೆ ಒದಗಿಸಲಾಗುವುದು” ಎಂದು ಸಹಾಯ್ ಅವರು ಉತ್ತರ ನೀಡುತ್ತಾರೆ.

“ಅತ್ಯುತ್ತಮ ಐಡಿಯಾ (ಚಿಂತನೆ)ಗಳನ್ನು ನೀಡುವವರಿಗೆ 1ಲಕ್ಷ ರೂ.ಗಳವರೆಗೆ ನಗದು ಬಹುಮಾನ ನೀಡಲಾಗುತ್ತದೆ. ಅಷ್ಟೇ ಅಲ್ಲ. ಪೊಲೀಸ್ ಇಲಾಖೆಯೊಂದಿಗೆ ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುವ ಅವಕಾಶವನ್ನೂ ನೀಡಲಾಗುವುದು” ಎಂದು ಸಹಾಯ್ ಅವರು ನುಡಿಯುತ್ತಾರೆ.