ಕರ್ನಾಟಕ ಅಗ್ನಿಶಾಮಕದಳ: ಅನನ್ಯ, ಅಸದಳ

0
10

ಕರ್ನಾಟಕದಲ್ಲಿ ಅಗ್ನಿಶಾಮಕ ಮತ್ತು ತುರ್ತುಸೇವೆಗಳನ್ನು ಮೊದಲು ಬೆಂಗಳೂರು ದಕ್ಷಿಣ ಮತ್ತು ಉತ್ತರದಲ್ಲಿ ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿ 1942 ರಲ್ಲಿ ಸ್ಥಾಪಿಸಲಾಯಿತು. ಬಳಿಕ ಕರ್ನಾಟಕ ರಾಜ್ಯದಲ್ಲಿ ಬಳ್ಳಾರಿ, ಹೊಸಪೇಟೆ, ಮಂಗಳೂರು, ಉಡುಪಿ, ರಾಯಚೂರು ಐದು ಸ್ಥಳಗಳನ್ನು ಸೇರ್ಪಡೆಗೊಳಿಸಲಾಯಿತು. 1964ರಲ್ಲಿ ಕರ್ನಾಟಕ ಅಗ್ನಿಶಾಮಕ ಸೇವೆಗಳ ಅಧಿನಿಯಮ ಜಾರಿಗೊಳ್ಳುವವರೆಗೆ ಪೊಲೀಸ್ ಇಲಾಖೆಯ ನಿಯಂತ್ರಣದಡಿ ಅಗ್ನಿಶಾಮಕ ಸೇವೆಗಳ ಕಾರ್ಯನಿರ್ವಹಣೆ ಮುಂದುವರಿದಿತ್ತು. 1965 ನವೆಂಬರ್ 5 ರಂದು ಪ್ರತ್ಯೇಕ ಅಗ್ನಿಶಾಮಕ ಮತ್ತು ತುರ್ತುಸೇವೆಗಳನ್ನು ಹೊಸ ಅಧಿನಿಯಮದಡಿ ತರಲಾಯಿತು. ಸಾಮಾನ್ಯವಾಗಿ ದಳದ ನೇತೃತ್ವವನ್ನು ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯ ಅಧಿಕಾರಿಯೊಬ್ಬರು ವಹಿಸುತ್ತಾರೆ. ಅಧಿಕಾರೇತರ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಮಹಾನಿರ್ದೇಶಕರಿಗೆ ದೈನಂದಿನ ಕಾರ್ಯನಿರ್ವಹಣೆಗೆ ಆಡಳಿತ ಮತ್ತು ತಾಂತ್ರಿಕ ವಿಷಯಗಳೆರಡರಲ್ಲಿಯೂ ಅನೇಕ ಅಧಿಕಾರಿಗಳು ನೆರವಾಗುವರು.

ಧ್ಯೇಯೋದ್ದೇಶಗಳು

ರಾಜ್ಯ ಅಗ್ನಿಶಾಮಕದಳವು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಅಗ್ನಿದುರಂತಗಳಾಗದಂತೆ ಫೈರ್‍ರಾಡಾರ್ ಘಟಕದ ಮುಖಾಂತರ ಅರಿವನ್ನು ಮೂಡಿಸುತ್ತದೆ. ಅಗ್ನಿ ಅವಘಡಗಳ ಸಂದರ್ಭಗಳಲ್ಲಿ, ತುರ್ತು ಸನ್ನಿವೇಶಗಳಲ್ಲಿ ಜನತೆಯ ಪ್ರಾಣ ಮತ್ತು ಆಸ್ತಿಪಾಸ್ತಿಗಳ ರಕ್ಷಣೆ, ಮಾನವಕೃತ ಮತ್ತು ನೈಸರ್ಗಿಕ ವಿಪತ್ತು (ವಿಕೋಪ)ಗಳ ಸನ್ನಿವೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳು, ತುರ್ತಾಗಿ ತೆರವುಗೊಳಿಸುವಿಕೆ ಮತ್ತು ಸ್ಥಳಾಂತರ, ಬಹುಮಹಡಿ ಕಟ್ಟಡಗಳು, ಸಾರ್ವಜನಿಕ ಮನೋರಂಜನಾ ತಾಣಗಳು, ಅಪಾಯಕಾರಿ ವಸ್ತುಗಳ ಅಂಗಡಿಗಳು- ಕಾರ್ಖಾನೆಗಳು- ಗೋದಾಮುಗಳು, ವಾಣಿಜ್ಯ ಸಮುಚ್ಚಯಗಳು ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಅನುಷ್ಠಾನ, ಈ ನಿಟ್ಟಿನಲ್ಲಿ ತರಬೇತಿ ನೀಡಿಕೆ,ಪ್ರಾತ್ಯಕ್ಷಿಕೆಗಳು, ಉಪನ್ಯಾಸ ತರಗತಿಗಳು, ವಿಚಾರ ಸಂಕಿರಣಗಳು ಮತ್ತು ವಸ್ತು ಪ್ರದರ್ಶನಗಳ ಮೂಲಕ ಸಾರ್ವಜನಿಕರಲ್ಲಿ ಅಗ್ನಿ ಅವಘಡಗಳ ಬಗ್ಗೆ ಅರಿವು ಮೂಡಿಸುವುದು, ಮುಂತಾದ ಧ್ಯೇಯೋದ್ದೇಶಗಳನ್ನು ಹೊಂದಿದೆ.

ಮುನ್ನೋಟ

ಇಲಾಖೆಯು ಅಗ್ನಿ ಅಪಘಾತ ಘಟಿಸುವ ಸ್ಥಳಕ್ಕೆ 10 ನಿಮಿಷಗಳ ಒಳಗಾಗಿ ಧಾವಿಸಿ ಅಗ್ನಿಶಾಮಕ ಮತ್ತು ತುರ್ತುಸೇವೆಗಳನ್ನು ಒದಗಿಸುತ್ತದೆ. ಅಗ್ನಿಶಾಮಕ ಠಾಣೆಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ಅವುಗಳನ್ನು ಮೇಲ್ದರ್ಜೆಗೇರಿಸುವುದು, ಠಾಣೆಗಳಲ್ಲಿ ಅಗತ್ಯ ಹೈಟೆಕ್ ವಾಹನಗಳು ಮತ್ತು ಸಲಕರಣೆಗಳನ್ನು ಸಂಗ್ರಹಿಸುವುದು ಎಲ್ಲಾ ತುರ್ತು ವಾಹನಗಳಲ್ಲಿ ಜಿಪಿಎಸ್ ಪದ್ಧತಿಯನ್ನು ಅಳವಡಿಸಿಕೊಳ್ಳುವುದು, ವಿಪತ್ತು (ವಿಕೋಪ) ನಿರ್ವಹಣೆಗಾಗಿ ಸಕಲ ಅಗ್ನಿಶಾಮಕ ಠಾಣೆಗಳನ್ನು ಒಂದೇ ಕಂಪ್ಯೂಟರ್ ಜಾಲದಡಿ ತರುವುದು, ಶಾಂತಿ ಮತ್ತು ಸಮರ ಕಾಲಗಳೆರಡರಲ್ಲಿಯೂನಾವು ಸುರಕ್ಷತೆಗಾಗಿ ಸೇವೆ ಸಲ್ಲಿಸುವೆವು ಘೋಷವಾಕ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವುದು ಇಲಾಖೆಯ ಪ್ರಮುಖ ಮುನ್ನೋಟಗಳಾಗಿವೆ.

ಶ್ರೀ ಎಂ.ಎನ್. ರೆಡ್ಡಿ ಐಪಿಎಸ್‍ರವರು ಕರ್ನಾಟಕ ರಾಜ್ಯ ಅಗ್ನಿ ಶಾಮಕದಳದ ನೇತೃತ್ವ ವಹಿಸಿಕೊಂಡ ಬಳಿಕ ಇಲಾಖೆಯು ಸಾಕಷ್ಟು ಪ್ರಗತಿ ಸಾಧಿಸಿದ್ದು ಸೇವೆಯಲ್ಲಿ ಸಾರ್ಥಕತೆ ಹೊಂದಿದೆ. ಮುಂಗಾರು ಮಳೆಗಾಲ ಸೃಷ್ಟಿಸಬಹುದಾದ ಅನಾಹುತಗಳ ತಡೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಆಯುಕ್ತ ಮಹೇಶ್ವರರಾವ್ ಮತ್ತು ಅಗ್ನಿಶಾಮಕದಳದ ಎಡಿಜಿಪಿ ಸುನೀಲ್ ಅಗರ್‍ವಾಲ್ ಮತ್ತು ಅವರ ತಂಡಗಳು ಬೆಂಗಳೂರು ನಗರದಲ್ಲಿ ತುರ್ತು ಸನ್ನಿವೇಶಗಳ ನಿಭಾವಣೆಯ ಸನ್ನದ್ಧತೆಗಳ ಪಾರಾಮರ್ಶೆ ನಡೆಸಿತು,

22-03-2018 ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಆರ್.. ಮಧುಕರ್ ಫೈರ್ ಅಕಾಡೆಮಿಯಲ್ಲಿ ರಾಜ್ಯದ ಮಾನ್ಯ ಗೃಹಸಚಿವರು ಮಾನವಶಕ್ತಿ ಅಗತ್ಯವನ್ನು ಕನಿಷ್ಠಗೊಳಿಸುವ ಎನ್ಒಸಿ/ಸಿಸಿ ಅಪ್ಲಿಕೇಶನ್ಗಳ ಪ್ರಕ್ರಿಯೆಗಾಗಿಅಗ್ನಿ‘-2’ ಎಂಬ ಸ್ವಯಂಚಾಲಿತ ಆನ್ಲೈನ್ ಫೈರ್ ಅಪ್ರೂವಲ್ ಸಿಸ್ಟಮ್ಗೆ ಚಾಲನೆ ನೀಡಿದರು.

ಪ್ರಸಕ್ತ ಮುಂಗಾರು ಮಳೆಗಾಲದಲ್ಲಿ ಮಂಗಳೂರಿನಲ್ಲಿ ವರುಣನ ಆರ್ಭಟ ಜೋರಾಯಿತು. ಮಂಗಳೂರುಉಡುಪಿ ಅಕ್ಷರಶಃ ಜಲಾವೃತವಾದವು ಮರಗಳು ಧರೆಗುರುಳಿದವು. ಕೆಲವೆಡೆ ಭೂಕುಸಿತವೂ ಸಂಭವಿಸಿತು. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಬುಡಮೇಲಾದ ಮರಗಳನ್ನು ತೆರವುಗೊಳಿಸಿ ಸಾರ್ವಜನಿಕರು ಮತ್ತು ವಾಹನಗಳ ಸಂಚಾರವನ್ನು ಸುಗಮಗೊಳಿಸಿದರು.

ಅಗ್ನಿ 2 ಅಡಿ ಪ್ರತಿಯೊಂದು ವಾಣಿಜ್ಯ ಮತ್ತು ವಸತಿ ಕಟ್ಟಡದ ಮಾಲೀಕರು ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‍ಒಸಿ) ಕ್ಕಾಗಿ ಯಾವುದೇ ನಿರ್ಬಂಧಗಳಿಲ್ಲದೆ ಅರ್ಜಿ ಸಲ್ಲಿಸಬಹುದಾಗಿದೆ. ಅಗ್ನಿ 2 ಸಾರ್ವಜನಿಕ ಕಟ್ಟಡಗಳು, ವಸತಿ ಅಪಾರ್ಟ್ಮೆಂಟ್ಗಳು, ವಾಣಿಜ್ಯ ಸಮುಚ್ಚಯಗಳು, ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ಸ್ಥಳಗಳ ಮಾಲೀಕರುಗಳಿಗೆ ಆನ್ಲೈನ್ ಪ್ರಕ್ರಿಯೆಯ ಮೂಲಕ ಅಗ್ನಿಶಾಮಕ ಇಲಾಖೆಯಿಂದ ಎನ್ಒಸಿ ಪಡೆದುಕೊಳ್ಳಲು ನೆರವು ನೀಡುತ್ತದೆ.

ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ಹೇಳುವಂತೆಅಗ್ನಿ-2 ಯಾರೇ ಆದರೂ ಎನ್ಒಸಿಗೆ ಅರ್ಜಿ ಸಲ್ಲಿಸಬಹುದಾದ ಒಂದು ವೇದಿಕೆಯಾಗಿದೆ. ಅವರು ಅಗತ್ಯ ವಿವರಗಳೊಂದಿಗೆ ಅರ್ಜಿಗಳನ್ನು ಭರ್ತಿಮಾಡಿ ನಿಗದಿತ ಮೊತ್ತದ ಶುಲ್ಕವನ್ನು ಭರ್ತಿ ಮಾಡಬೇಕಾಗುತ್ತದೆ. ಇದಾದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯ ಒಂದು ತಂಡ ಸ್ಥಳ ಪರಿಶೀಲನೆ ನಡೆಸುತ್ತದೆ, ನಿಗದಿತ ಮಾನದಂಡಗಳನ್ನು ಅನುಸರಿಸುವುದು ಕಂಡುಬಂದರೆ ಅರ್ಜಿಯನ್ನು ಪರಿಗಣಿಸಲಾಗುತ್ತದೆ. ಮಾನದಂಡಗಳ ಅನುಸರಣೆ ಇಲ್ಲವಾದಲ್ಲಿ ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಮತ್ತು ಅರ್ಜಿದಾರರು ನ್ಯೂನತೆಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ

“ಅರ್ಜಿ ಸಲ್ಲಿಸುವಾಗ ಸುರಕ್ಷತಾ ಮಾನದಂಡಗಳ ಅನುಸರಣೆ ಬಗ್ಗೆ ಕೆಲವು ಪ್ರಶ್ನೆಗಳಿರುತ್ತವೆ. ಇವು ಅನ್ವಯವಾಗದಿದ್ದರೆ ಅರ್ಜಿದಾರರು ಮುಂದುವರಿಯುವ ಅಗತ್ಯ ಇರುವುದಿಲ್ಲ. ಈ ಪ್ರಕ್ರಿಯೆಯು ಸುಲಭವಾಗಿದ್ದು ಕಾಲವಿಳಂಬವಿಲ್ಲದೆ ಎನ್ಒಸಿ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ರೆಸ್ಟೋರೆಂಟ್, ಪಬ್ಗಳುಮಾಲ್ಗಳು, ಅಪಾರ್ಟ್ಮೆಂಟ್ಗಳಂತಹ ಪ್ರತಿಯೊಂದು ಕಟ್ಟಡಗಳಿಗೂ ಇಲಾಖೆ ನಿಗದಿಪಡಿಸಿರುವ ಸುರಕ್ಷತಾ ಮಾನದಂಡಗಳ ಅನುಸರಣೆ ಕಡ್ಡಾಯವಾಗಿರುತ್ತದೆ. ನಿಯಮ ಪಾಲನೆ ಸರಿಯಾಗಿದ್ದಲ್ಲಿ ಎನ್ಒಸಿ ಪಡೆಯುವುದು ಕೂಡ ಸುಲಭವಾಗುತ್ತದೆ,

ಶ್ರೀ ಎಂ.ಎನ್.ರೆಡ್ಡಿ, ಐಪಿಎಸ್ರವರು ಅಗ್ನಿಶಾಮಕದಳದ ಪ್ರಸಕ್ತ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಅವರ ಮಾತುಗಳಲ್ಲೇ ಹೇಳುವುದಾದರೆಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯು ಅಗ್ನಿಶಮನ, ರಕ್ಷಣಾ ಕಾರ್ಯಗಳಲ್ಲಿ ಮೊಟ್ಟಮೊದಲು ಸ್ಪಂದಿಸುವ ಇಲಾಖೆಯಾಗಿದೆ. ಇಲಾಖೆಯ ಸಿಬ್ಬಂದಿ ಅಪಾಯಕಾರಿ, ವಿಷಯುಕ್ತ ಪ್ರದೇಶಗಳು ಮತ್ತು ಕುಸಿದ ಕಟ್ಟಡಗಳಂಥ ಪ್ರದೇಶಗಳಲ್ಲಿ ಜೀವದ ಹಂಗು ತೊರೆದು ಜನತೆಯ ಪ್ರಾಣ ಮತ್ತು ಆಸ್ತಿಯ ರಕ್ಷಣೆಯಲ್ಲಿ ನಿರತರಾಗುತ್ತಾರೆ.

ನೂತನ ಸುಧಾರಿತ ಕಟ್ಟಡ ನಿರ್ಮಾಣ ತಂತ್ರಜ್ಞಾನಗಳು, ನೂತನ ರಾಸಾಯನಿಕಗಳ ಸೇರ್ಪಡೆ ಮತ್ತು ದೈನಂದಿನ ಜೀವನದಲ್ಲಿ ಸಿಂಥೆಟಿಕ್ ವಸ್ತುಗಳ ಬಳಕೆಯಲ್ಲಿನ ಹೆಚ್ಚಳವು ಅಗ್ನಿ ಸಂಬಂಧಿತ   ಅಪಾಯಗಳು ಮತ್ತು ಈ ಇಲಾಖೆಯ ಹೊಣೆಗಾರಿಕೆಗಳನ್ನು ಹೆಚ್ಚಿಸಿದೆ.

ಇಷ್ಟಲ್ಲದೆ, ಸಮೂಹ ಸಾರಿಗೆ ವ್ಯವಸ್ಥೆ, ಗಗನಚುಂಬಿ ಕಟ್ಟಡಗಳು, ವಾಯುಯಾನಸುರಂಗ ಸಾರಿಗೆ, ನಳಿಕೆಗಳ ಮೂಲಕ ರಾಸಾಯನಿಕಗಳ ಸಾಗಣೆ, ಪೆಟ್ರೋಕೆಮಿಕಲ್ಸ್, ಅನಿಲ ಇತ್ಯಾದಿಗಳ ಪಂಪ್ ಮಾಡುವಿಕೆ, ಜೀವಬೆದರಿಕೆಯನ್ನು ಅಧಿಕಗೊಳಿಸಿವೆ. ಇಲಾಖೆಯು ಸಾಮಥ್ರ್ಯ ನಿರ್ಮಾಣ, ಮುಂದುವರಿದ ತರಬೇತಿ, ಸಲಕರಣೆಗಳ ಸಂಗ್ರಹಣೆ ಇತ್ಯಾದಿಗಳೊಂದಿಗೆ ಇಂಥ ಸನ್ನಿವೇಶಗಳನ್ನು ಎದುರಿಸಲು ಸುಸಜ್ಜಿತವಾಗಿದೆ. ನಿಟ್ಟಿನಲ್ಲಿ ಸಮರ್ಪಕ ಹೆಜ್ಜೆಗಳನ್ನಿರಿಸುತ್ತ ಮುನ್ನಡೆಯುತ್ತಿರುವ ಇಲಾಖೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವುದೆಂಬ ನಿರೀಕ್ಷೆ ಇದೆ.

ದಿಶೆಯಲ್ಲಿ ಆಂತರಿಕ ಸಂವಹನದ ಭಾಗವಾಗಿ ಸಾಮಥ್ರ್ಯ ನಿರ್ಮಾಣ, ಜ್ಞಾನದ ವಿನಿಮಯ ಮತ್ತು ಸೃಜನಶೀಲತೆಯ ಪ್ರವರ್ಧನೆಯ ಅuÀತ್ಯವಿದೆ.