ಕಣ್ಮರೆಯಾಗಿದ್ದ ವೃದ್ಧೆ ಪತ್ತೆ

0
3

ಮಲ್ಲೇಶ್ವರದ 17ನೇ ಕ್ರಾಸ್ ನಿವಾಸಿ 85 ವರ್ಷ ವಯಸ್ಸಿನ ಕಮಲಮ್ಮ ಎಂಬ ವೃದ್ಧೆ ಇತ್ತೀಚೆಗೆ ಕಾಣೆಯಾಗಿದ್ದರು. ಈ ಕುರಿತು ದೂರು ಸ್ವೀಕರಿಸಿದ ವೈಯಾಲಿಕಾವಲ್ ಹೊಯ್ಸಳ ವಾಹನದ ಸಿಬ್ಬಂದಿ ಸಹಾಯಕ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಶ್ರೀ ಮುನಿಸ್ವಾಮಯ್ಯ ಹಾಗೂ ಪವನ್‍ರವರು ತತ್‍ಕ್ಷಣವೇ ಕಾರ್ಯಪ್ರವೃತ್ತರಾಗಿ ಗಸ್ತು ಕಾರ್ಯದ ವೇಳೆ ಆ ವೃದ್ಧೆಯನ್ನು ಪತ್ತೆಮಾಡಿ ಅವರ ಕುಟುಂಬದ ಸದಸ್ಯರನ್ನು ಕರೆಸಿ ಹಸ್ತಾಂತರಿಸಿದರು. ಇವರ ಈ ಉತ್ತಮ ಕಾರ್ಯಕ್ಕೆ ಸರ್ವತ್ರ ಶ್ಲಾಘನೆ ವ್ಯಕ್ತವಾಗಿದೆ.