ಆಟೋ ಚಾಲಕನ ಪ್ರಾಮಾಣಿಕತೆಗೆ ಆಯುಕ್ತರ ಪ್ರಶಂಸೆ

0
3

ಮಾಲ್ಡೀವ್ಸ್‍ನಲ್ಲಿ ನೆಲೆಸಿರುವ ಭಾರತೀಯ ವೈದ್ಯ ಡಾ. ಎಂ.ಆರ್. ಭಾಸ್ಕರ್ ಎಂಬವರು ಆಟೋರಿಕ್ಷಾದಲ್ಲಿ ಪ್ರಯಾಣಿಸುವಾಗ 1,50,000 ರೂ. ಭಾರತೀಯ ಕರೆನ್ಸಿ ಮತ್ತು ಅಂದಾಜು 10 ಲಕ್ಷ ರೂ. ಮೌಲ್ಯದ 12,000 ಅಮೆರಿಕನ್ ಡಾಲರ್‍ಗಳ ನಗದು ಮೊತ್ತವಿದ್ದ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ ರಮೇಶ್‍ಬಾಬು ನಾಯಕ್‍ರವರು ಪ್ರಾಮಾಣಿಕವಾಗಿ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದರು. ನಾಯಕ್‍ರವರ ಈ ಪ್ರಾಮಾಣಿಕ ಕಾರ್ಯಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಭಾಸ್ಕರರಾವ್ ಐಪಿಎಸ್‍ರವರು ಪ್ರಶಂಸೆ ವ್ಯಕ್ತಪಡಿಸಿದರು.