ಕೊರೋನಾ ರುದ್ರತಾಂಡವ – ಪೊಲೀಸರ ಕರ್ತವ್ಯ ನಿಷ್ಠೆ

0
690

ಚೀನಾದಲ್ಲಿ ಉಗಮಿಸಿ ಪ್ರಪಂಚದಾದ್ಯಂತ ನೂರಾರು ದೇಶಗಳನ್ನು ತಲ್ಲಣಗೊಳಿಸಿರುವ ಕೊರೋನಾ ವೈರಸ್ ಈಗ ಭಾರತಕ್ಕೆ, ಕರ್ನಾಟಕಕ್ಕೂ ಕಾಲಿರಿಸಿದೆ. ಎಲ್ಲೆಡೆ ಕೊರೋನಾ ಬಗ್ಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ದುಬೈನಿಂದ ಹಿಂತಿರುಗಿ ಬಂದ 76ರ ವೃದ್ಧರೊಬ್ಬರು ಅಸುನೀಗಿದ್ದು ದೇಶದಲ್ಲಿ ಕೊರೋನಾಕ್ಕೆ ಪ್ರಥಮ ಬಲಿ ಎನಿಸಿತು. ಈ ಘಟನೆಯ ಬಳಿಕ ರಾಜ್ಯದ ಜನತೆ ಭಯವಿಹ್ವಲರಾಗಿದ್ದಾರೆ.

ರಾಜ್ಯ ಸರ್ಕಾರವು ಕೊರೋನಾ ವೈರಸ್ ಪ್ರಸರಣ ತಡೆಯಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಾಲ್‍ಗಳು, ಚಿತ್ರಮಂದಿರಗಳನ್ನು ಮುಚ್ಚುವಂತೆ ಆದೇಶಿಸಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಪರೀಕ್ಷೆಗಳನ್ನು ಮುಂದೂಡಿದೆ. ಸಾರ್ವಜನಿಕ ಸಮಾರಂಭಗಳನ್ನು, ಸಹಸ್ರಾರು ಜನರು ಗುಂಪುಗೂಡುವುದನ್ನು  ನಿಷೇಧಿಸಿದೆ.  ರ್ಯಾಲಿಗಳು, ಪ್ರತಿಭಟನೆಗಳನ್ನು ನಡೆಸದಂತೆ ಸೂಚಿಸಿದೆ.

ರಾಜ್ಯದಲ್ಲಿ ನೂರಾರು ಮಂದಿಗೆ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕ ಅಘೋಷಿತ ಬಂದ್ ಆಗಿದೆ. ಭಾಗಃಶ ಸ್ತಬ್ಧವಾಗಿದೆ. ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಮೆಟ್ರೋ ಮುಂತಾದ ಸಾರ್ವಜನಿಕ ಸಾರಿಗೆ, ಆಟೋ ರಿಕ್ಷಾ, ಟ್ಯಾಕ್ಸಿ ಮೊದಲಾದ ಖಾಸಗಿ ಸಾರಿಗೆ ಬಳಸುವವರ ಸಂಖ್ಯೆ ಸಹ ಕುಸಿದಿದ್ದು ಬಸ್, ರೈಲು ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳು ಭಣಗುಡತೊಡಗಿವೆ. ಕೆಲವು ಐಟಿ-ಬಿಟಿ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದ ಕೆಲಸ (ವರ್ಕ್ ಫ್ರಂ ಹೋಮ್) ಮಾಡಲು ಸೂಚಿಸಿವೆ. ವ್ಯಕ್ತಿಗಳು ಜ್ವರ-ನೆಗಡಿ-ಕೆಮ್ಮು ಮುಂತಾದವುಗಳಿಂದ ಬಳಲುವವರೊಡನೆ ನಿಕಟ ಸಂಪರ್ಕ ಸಾಧಿಸದೆ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿಯನ್ನು ರದ್ದು ಪಡಿಸಲಾಗಿದೆ. ವಾರ್ಷಿಕ ಐಪಿಎಲ್ (ಇಂಡಿಯನ್  ಪ್ರೀಮಿಯರ್  ಲೀಗ್)  ಕ್ರಿಕೆಟ್ ಪಂದ್ಯಾವಳಿಯನ್ನೂ ಮುಂದೂಡಲಾಗಿದೆ.

ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಎಲ್ಲ ರಜೆಗಳನ್ನು ರದ್ದುಪಡಿಸಲಾಗಿದೆ. ಸಮರೋಪಾದಿಯಲ್ಲಿ ಅವಿಶ್ರಾಂತವಾಗಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ. ಈಗಾಗಲೇ ರಜೆಯಲ್ಲಿದ್ದವರಿಗೆ ಪುನಃ ಕೆಲಸಕ್ಕೆ ಬರುವಂತೆ ಕರೆ ನೀಡಲಾಗಿದೆ.

ಅದೇ ರೀತಿ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಕರೋನಾ ಎಫೆಕ್ಟ್‍ನ ಬಿಸಿ ತಟ್ಟಿದೆ, ಕೊರೋನಾ ವೈರಸ್ ಸೋಂಕಿತರ ಪತ್ತೆ ಮಾಡುವುದು, ವೈರಸ್ ಪೀಡಿತರೆಂಬ ಶಂಕಿತರ ಮೇಲೆ ನಿಗಾ ಇರಿಸುವುದು, ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಭದ್ರತೆ ಒದಗಿಸುವುದು ಮುಂತಾಗಿ ಎಡೆಬಿಡದೆ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ.

ಇತ್ತೀಚೆಗೆ ಮಂಗಳೂರಿನ ಓರ್ವ ಕೊರೋನಾ ಶಂಕಿತೆ ಚಿಕಿತ್ಸೆ ತಡೆಯಲು ನುಣುಚಿಕೊಂಡು ಪಶ್ಚಿಮ ಬಂಗಾಳದ ಕೋಲ್ಕತಾಕ್ಕೆ ಪರಾರಿಯಾಗಿದ್ದು ಕೋಲ್ಕತಾಕ್ಕೆ ತೆರಳಿ ಆಕೆಯನ್ನು ಬೆಂಗಳೂರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. “ಆಕೆ ನಮ್ಮ ಮನೆಗೆ ಬಂದಿಲ್ಲ, ಮಂಗಳೂರಿಗೆ ತೆರಳಿದ್ದಾರೆ” ಎಂದು ಸುಳ್ಳು ಮಾಹಿತಿ ನೀಡಿದ ಆ ಮಹಿಳೆಯ ತಂದೆಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕೊರೋನಾ ವೈರಸ್‍ಗೆ ಸಂಬಂಧಪಟ್ಟ ಲಕ್ಷಣಗಳಿದ್ದ ಓರ್ವ ವ್ಯಕ್ತಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ತಪ್ಪಿಸಿಕೊಂಡಿದ್ದ. ಒಂದು ಇಡೀದಿನ ಶೋಧಕಾರ್ಯ ನಡೆಸಿದ ಬಳಿಕ ಆತನನ್ನು ಕರ್ನಾಟಕದ ಮಂಗಳೂರಿನಲ್ಲಿ ಪತ್ತೆ ಮಾಡಲಾಯಿತು. ದುಬೈನಿಂದ ಬಂದಿದ್ದ ಈತ ವೈದ್ಯರ ಸಲಹೆ ನಿರ್ಲಕ್ಷಿಸಿ ತಪಾಸಣೆಗೊಳಪಡದೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಎಂಬುದಾಗಿ ಆರೋಪಿಸಲಾಯಿತು. ಅವನನ್ನು ಆಸ್ಪತ್ರೆಗೆ ಕರೆದೊಯ್ದಲಾಯಿತು.

ಆತನಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಈಗ ಸಹಕರಿಸುತ್ತಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್.ಸಿಂಧು ಅವರು ಖಚಿತಪಡಿಸಿದರು.

ಕೊರೋನಾ ಸಾಂಕ್ರಾಮಿಕ ಪಿಡುಗನ್ನು ಸವಾಲಾಗಿ ಸ್ವೀಕರಿಸಿರುವ ರಾಜ್ಯ ಪೊಲೀಸ್ ಇಲಾಖೆ ಯುದ್ಧ ಸನ್ನದ್ಧ ರೀತಿಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಭಾರತದಾದ್ಯಂತ ಕೊರೋನಾ ಪೀಡಿತರ ಸಂಖ್ಯೆ ಸಾವಿರಾರು ಲೆಕ್ಕದಾಟಿದೆ. 210 ಕ್ಕೂ ಅಧಿಕ ದೇಶಗಳಲ್ಲಿ ಕೊರೋನಾ ವ್ಯಾಪಿಸಿದ್ದು  2ಲಕ್ಷಕ್ಕೂ  ಅಧಿಕ  ಮಂದಿ  ಇದಕ್ಕೆ ಬಲಿಯಾಗಿದ್ದಾರೆ. ಇರಾನ್, ಇಟಲಿಗೆ ತೆರಳಿದ್ದ, ಕ್ರಮವಾಗಿ ಕಾಶ್ಮೀರದ ಓರ್ವ 63 ವರ್ಷದ ಮಹಿಳೆ ಮತ್ತು ಕೇರಳದ ಮೂರು ವರ್ಷದ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವ ಇತ್ತೀಚಿನ ಪ್ರಕರಣಗಳಾಗಿವೆ. ಕೇರಳ, ತಮಿಳುನಾಡು ಮುಂತಾದ ನೆರೆರಾಜ್ಯಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಶಿಶುವಿಹಾರಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಿಸಲಾಗಿದೆ.

ಕೊರೋನಾ ವೈರಸ್ ಎಚಿದರೇನು?

ಕೊರೋನಾ ವೈರಸ್ ಸಂಬಂಧಿತ ವೈರಸ್‍ಗಳ ಒಂದು ಗುಂಪಾಗಿದ್ದು  ಸಸ್ತನಿಗಳಲ್ಲಿ  ಮತ್ತು  ಪಕ್ಷಿಗಳಲ್ಲಿ ಕಾಯಿಲೆಗಳನ್ನುಂಟುಮಾಡುತ್ತದೆ. ಮನುಷ್ಯರಲ್ಲಿ ಸಾಮಾನ್ಯ ಶೀತ-ನೆಗಡಿಯಂತಹ ಶ್ವಾಸನಾಳದ ಸೋಂಕನ್ನುಂಟು ಮಾಡುತ್ತದೆ. ಅಪರೂಪದ ಪ್ರಕರಣಗಳಲ್ಲಿ ಸಾರ್ಸ್, ಮೆರ್ಸ್ ಮತ್ತು ಕೋವಿಡ್-19 ವೈರಸ್‍ಗಳ ರೀತಿ ಇದು ಮಾರಕವಾಗಬಹುದು, ಇತರ ಪ್ರಾಣಿಗಳಿಗೆ ಸಂಬಂಧಿಸಿದಂತೆ ಕೋಳಿಗಳಲ್ಲಿ  ಇದು  ಮೇಲಿನ  ಶ್ವಾಸನಾಳ ಕಾಯಿಲೆಯನ್ನುಂಟುಮಾಡಬಹುದು, ದನಕರುಗಳು ಮತ್ತು ಹಂದಿಗಳಲ್ಲಿ  ಇದು  ಅತಿಸಾರವನ್ನುಂಟು ಮಾಡಬಹುದಾಗಿರುತ್ತದೆ. ಮಾನವ ಕೊರೋನಾ ವೈರಸ್ ಸೋಂಕುಗಳಿಗೆ ಲಸಿಕೆ (ವ್ಯಾಕ್ಸಿನ್)ಗಳು ಮತ್ತು ವೈರಸ್ ನಿಗ್ರಹ ಔಷಧಗಳನ್ನು ಇನ್ನಷ್ಟೇ ಕಂಡುಹಿಡಿಯಬೇಕಾಗಿದೆ.

ಹರಡುವ ಬಗೆ

ಕೊರೋನಾ ವೈರಸ್ ಸೀನುವಿಕೆ ಮತ್ತು ಕೆಮ್ಮುವುದರಿಂದ ಸಿಡಿಯುವ ಕಫದ ಕಣಗಳ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ನಿಕಟ ಸಂಪರ್ಕದ ಮೂಲಕ ಶ್ವಾಸಕೋಶಗಳಿಗೆ ಇದು ಸೋಂಕುತ್ತದೆ. ಉದಾಹರಿಸುವುದಾದರೆ ಸಾರ್ಸ್ ಕೊರೋನಾ ವೈರಸ್ ಮಾನವರಿಗೆ ಆಂಜಿಯೋಟೆನ್ಸಿನ್ ಪರಿವರ್ತನೀಯ ಕಿಣ್ವ2 (ಂಅಇ2)  ರಿಸೆಪ್ಟರ್ ಮೂಲಕ ಸೋಂಕುತ್ತದೆ.

ಕೊರೋನಾ ವೈರಸ್‍ಗಳು ಅಪಾಯ ಸಂಗತಿಗಳಲ್ಲಿ ವಿಭಿನ್ನವಾಗಿರುತ್ತವೆ. ಮರ್ಸ್ ಕೊರೋನಾ ವೈರಸ್‍ನಂತಹ ಕೆಲವು ವೈರಸ್‍ಗಳು ಶೇ.30ಕ್ಕೂ ಅಧಿಕ ಸೋಂಕಿತರನ್ನು ಕೊಲ್ಲಬಹುದು. ಕೆಲವು ವೈರಸ್‍ಗಳು ಸಾಮಾನ್ಯ ಶೀತದಂತೆ ಸಾಪೇಕ್ಷವಾಗಿ ಹಾನಿಕಾರವಲ್ಲದೆ ಇರಬಹುದು. ಕೊರೋನಾ ವೈರಸ್‍ಗಳು ಜ್ವರ, ಗಂಟಲುನೋವು, ಅಡೆನಾಯ್ಡ್‍ಗಳ ಊತದಂತಹ ಪ್ರಮುಖ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಈ ವೈರಸ್‍ಗಳು ಚಳಿಗಾಲ ಮತ್ತು ವಸಂತ ಋತುವಿನ ಆರಂಭದಲ್ಲಿ ಉಚ್ಛ್ರಾಯ ಸ್ಥಿತಿಗೆ ಬರುತ್ತವೆ.

ಕೊರೋನಾ ವೈರಸ್‍ಗಳು ನ್ಯೂಮೋನಿಯಾ (ನೇರ ವೈರಲ್ ನ್ಯೂಮೋನಿಯಾ ಅಥವಾ ದ್ವಿತೀಯಕ ಬ್ಯಾಕ್ಟೀರಿಯಲ್ ನ್ಯೂಮೋನಿಯಾವನ್ನು) ಉಂಟುಮಾಡಬಹುದು ಮತ್ತು ಬ್ರಾಂಕೈಟಿಸ್ (ನೇರ ವೈರಲ್ ಬ್ರಾಂಕೈಟಿಸ್ ಅಥವಾ ದ್ವಿತೀಯಕ ಬ್ಯಾಕ್ಟೀರಿಯಲ್ ಬ್ರಾಂಕೈಟಿಸ್)ಗೆ ಕಾರಣವಾಗಬಹುದು, ಅತಿಯಾಗಿ ಕುಖ್ಯಾತವಾದ ಮಾನವ ಕೊರೋನಾ ವೈರಸ್ ಅನ್ನು 2003ರಲ್ಲಿ ಪತ್ತೆ ಹಚ್ಚಲಾಯಿತು. ಇದು ಸಾರ್ಸ್-ಕೊರೋನಾ ವೈರಸ್. ಇದು ತೀವ್ರ ಗಂಭೀರ ಉಸಿರಾಟದ ಸಮಸ್ಯೆ – (Seveಡಿe ಚಿಛಿuಣe ಖesಠಿiಡಿಚಿಣoಡಿಥಿ Sಥಿಟಿಜಡಿome – SಂಖS) ಯನ್ನು ತಂದೊಡ್ಡಬಲ್ಲದು, ಇದು ಒಂದು ವಿಶೇಷ ರೋಗಜನಕ ವೈರಸ್ ಆಗಿದೆ. ಏಕೆಂದರೆ ಇದು ಮೇಲಣ ಮತ್ತು ಕೆಳಗಣ ಶ್ವಾಸನಾಳಗಳೆರಡಕ್ಕೂ ಸೋಂಕನ್ನುಂಟುಮಾಡುತ್ತದೆ.

‘ಕೊರೋನಾ’ ಎಂಬ ಹೆಸರು ‘ಕೊರೋನಾ’ ಎಂಬ ಲ್ಯಾಟಿನ್ ಪದದಿಂದ ನಿಷ್ಪನ್ನವಾಗಿದೆ. ಇದರ ಅರ್ಥ ‘ಕಿರೀಟ’ ಅಥವಾ ‘ಸಂಪತ್ತು’ ಎಚಿದು.

ಕೊರೋನಾ ಲಕ್ಷಣಗಳು

ಬಳಲಿಕೆ, ತಲೆನೋವು, ಜ್ವರ, ಉಸಿರಾಟದ ತೊಂದರೆ, ಒಣಕೆಮ್ಮು.

ಬೆಂಗಳೂರು ನಗರ ಪೊಲೀಸರು ಕೊರೋನಾ ವೈರಸ್‍ನಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಸೂಚನೆಗಳನ್ನು ನೀಡಿದ್ದಾರೆ. ಅವು ಇಚಿತಿವೆ.

ಮಾಡಬೇಕಾದ್ದು :

  1. ಪದೇ ಪದೇ ನಿಮ್ಮ ಕೈಗಳನ್ನು ಸಾಬೂನು ಅಥವಾ ಆಲ್ಕೋಹಾಲ್ ಆಧರಿತ ಹ್ಯಾಂಡ್‍ರಬ್‍ಗಳು ಮತ್ತು ನೀರಿನಿಂದ ತೊಳೆದುಕೊಳ್ಳಿ.
  2. ಜ್ವರ/ನೆಗಡಿ/ಕೆಮ್ಮು/ ಉಸಿರಾಟದ ತೊಂದರೆ ಮೊದಲಾದ ಲಕ್ಷಣಗಳು ತೋರಿಬಂದರೆ ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ಮಾಸ್ಕ್‍ನಿಂದ ಮುಚ್ಚಿಕೊಂಡು ಕೂಡಲೇ ವೈದ್ಯರನ್ನು ಕಾಣಿ.
  3. ಕೊರೋನಾ ಸೋಂಕಿನ ಲಕ್ಷಣಗಳಿದ್ದರೆ 24/7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆಮಾಡಿ.
  4. ಉಪಯೋಗಿಸಿದ ಟಿಶ್ಯೂ ಕಾಗದ/ ಕರವಸ್ತ್ರವನ್ನು ಕೂಡಲೇ ಮುಚ್ಚಿದ ತೊಟ್ಟಿಯಲ್ಲಿ ಬಿಸಾಡಿರಿ.
  5. ಸೀನುವಾಗ ಮತ್ತು ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಟಿಶ್ಯೂ ಕಾಗದ ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಳಿ.
  6. ದೊಡ್ಡ ಸಭೆ ಸಮಾರಂಭಗಳಿಗೆ, ಮಾರುಕಟ್ಟೆಗಳಿಗೆ, ಜನನಿಬಿಡ ಪ್ರದೇಶಗಳಿಗೆ ತೆರಳಬೇಡಿ.

ಮಾಡಬಾರದ್ದು:

  1. ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಮುಟ್ಟಿಕೊಳ್ಳುವುದು.
  2. ನಿಮ್ಮಲ್ಲಿ ಜ್ವರ ಮತ್ತು ಕೆಮ್ಮು ಗೋಚರಿಸಿದರೆ ಅನ್ಯರೊಡನೆ ನಿಕಟ ಸಂಪರ್ಕ ಹೊಂದುವುದು.
  3. ಸಾರ್ವಜನಿಕ ಜಾಗಗಳಲ್ಲಿ ಉuÀುಳುವುದು.

ಕೊರೋನಾ ಎಂಬ ಹೆಮ್ಮಾರಿ ಭಾರತದಲ್ಲಿ ತನ್ನ ಕರಾಮತ್ತನ್ನು ತೋರಿಸಲಾರಂಭಿಸಿದಾಕ್ಷಣ ಕರ್ನಾಟಕದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕೊರೋನಾ ನಿಯಂತ್ರಣಕ್ಕೆ ಶಕ್ತಿಮೀರಿ ಶ್ರಮಿಸತೊಡಗಿತು. ಇಲಾಖೆಯ ಸಕಾಲಿಕ ಜಾಗ್ರತೆಯಿಂದಾಗಿ ಲಕ್ಷಾಂತರ ಜನರಿಗೆ ಕೊರೋನಾ ತಗುಲುವುದನ್ನು ತಡೆಗಟ್ಟಿದಂತಾಯಿತು ಎಂದು ಸರಕಾರದ ಅಂಕಿ-ಅಂಶಗಳೇ ಅರುಹುತ್ತವೆ.

2020ರ ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವಿರುದ್ಧದ ಕದನದ ಕುರುಹಾಗಿ ರಾಷ್ಟ್ರವ್ಯಾಪಿ ಜನತಾ ಕಫ್ರ್ಯೂಗೆ ಕರೆ ನೀಡಿದರು. ಅಂದಿನ ದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಯಾರೂ ಮನೆಯಿಂದ ಹೊರಗೆ ಬರಬಾರದೆಂದು, ಆ ದಿನ ಸಂಜೆ 5 ಗಂಟೆಗೆ ಮನೆಯ ಕಿಟಕಿ ಅಥವಾ ಬಾಗಿಲ ಬಳಿ ಇಲ್ಲವೇ ಬಾಲ್ಕನಿಯಲ್ಲಿ ನಿಂತು ಕೊರೋನಾ ವಿರುದ್ಧ ಹೋರಾಟದಲ್ಲಿ ಅಹರ್ನಿಶಿ ಶ್ರಮಿಸುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ, ಪೊಲೀಸ್ ಸಿಬ್ಬಂದಿಗೆ ಶ್ಲಾಘನಾರ್ಥವಾಗಿ 5 ನಿಮಿಷಗಳ ಕಾಲ ಕರತಾಡನ ಮಾಡಿ ಅಭಿನಂದಿಸುವಂತೆ ಮನವಿ ಮಾಡಿದ್ದರು.

ಈ ಮನವಿಗೆ ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಧಾನಿಯ ಈ ಕಫ್ರ್ಯೂ ಯಶಸ್ಸಿನಲ್ಲಿ ಪೊಲೀಸರು ಮಹತ್ತರ ಪಾತ್ರ ವಹಿಸಿದರು. ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಜನತಾ ಕಫ್ರ್ಯೂವನ್ನು ಸಫಲಗೊಳಿಸುವಂತೆ ಪ್ರಚಾರ ಮಾಡಿದರು.

ಬಳಿಕ ಭಾರತ ಲಾಕ್‍ಡೌನ್‍ಗೆ ಕೇಂದ್ರ ಸರ್ಕಾರ ಆದೇಶಿಸಿತು. ಲಾಕ್‍ಡೌನ್ ಸಂದರ್ಭದಲ್ಲಿ ಜನತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಪೊಲೀಸ್ ಸಿಬ್ಬಂದಿ ಅನವರತ ಶ್ರಮಿಸುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಜನರು ಮತ್ತು ವಾಹನ ಸಂಚಾರವನ್ನು ನಿಯಂತ್ರಿಸಿದರು. ಕೆಲವು ಜಂಕ್ಷನ್‍ಗಳಲ್ಲಿ ಕೊರೋನಾ ಮಾರಿಯ ವೇಷಧರಿಸಿ ನರ್ತನವೇ ಮುಂತಾದ ಪ್ರಾತ್ಯಕ್ಷಿಕೆಗಳ ಮೂಲಕ ಜನತೆಯಲ್ಲಿ ಕೊರೋನಾ ಬಗ್ಗೆ ಅರಿವು ಮೂಡಿಸಲು ಯತ್ನಿಸಿದರು.

ಮೋದಿಯವರು ಲಾಕ್‍ಡೌನ್‍ಗೆ ಕರೆ ನೀಡಿದ್ದರೂ ಜನತೆ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದವು. ಪ್ರಮುಖ ವೃತ್ತಗಳಲ್ಲಿ ಜನತೆಗೆ ಸ್ಯಾನಿಟೈಸರ್ ಬಳಕೆಯ ಬಗ್ಗೆ, ಸ್ವಚ್ಛತೆಯ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದರು. ಧ್ವನಿವರ್ಧಕದ ಮೂಲಕ ಕೊರೋನಾ ಬಗ್ಗೆ ಅರಿವು ಮೂಡಿಸಿದರು.

ಕೆಲವೆಡೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆಗಳೂ ಉಂಟು. ಕೆಲವು ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದೂ ಇದೆ. ಕೆಲವೆಡೆ ಜನರು ಅಕಾರಣವಾಗಿ ಅಲೆದಾಡುವ ಪ್ರಸಂಗಗಳು ಕಂಡು ಬಂದವು.

ಹಲವು ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಅನಗತ್ಯವಾಗಿ  ಮನೆಯಿಂದ  ಹೊರಬರದಂತೆ, ಅನವಶ್ಯಕವಾಗಿ ಸುತ್ತಾಡದಂತೆ, ಎಚ್ಚರಿಕೆ ವಹಿಸುವಂತೆ ಕೈಮುಗಿದು ಕೇಳಿಕೊಂಡದ್ದೂ ಇದೆ. ಒಬ್ಬಿಬ್ಬರು ಅಧಿಕಾರಿಗಳು ಈ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.

ಕೊರೋನಾ ಇಷ್ಟೆಲ್ಲ ವಿಧ್ವಂಸ ಉಂಟುಮಾಡುತ್ತಿದ್ದರೂ ಜನರು ನಿರ್ಲಕ್ಷ್ಯ ವಹಿಸಿ ಎಲ್ಲೆಂದರಲ್ಲಿ ಗುಂಪುಗೂಡುವುದು, ಅಗತ್ಯ ವಸ್ತುಗಳ  ಖರೀದಿಗೆ  ಮುಗಿಬೀಳುವುದು ಮಾಡಲಾರಂಭಿಸಿದರು. ಆಹಾರ ಪದಾರ್ಥಗಳ ಕೊರತೆಯಿಂದ ಬಳಲುವ ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆಹಾರ ಸಾಮಗ್ರಿಗಳ ಕಿಟ್, ಹಾಲಿನ ಪ್ಯಾಕೆಟ್‍ಗಳನ್ನು ಪೊಲೀಸರು ವಿತರಣೆ ಮಾಡಿದರು.

ಕೆಲವೆಡೆ ಅನಗತ್ಯವಾಗಿ ಹೊರಗೆ ಸಂಚಾರ ಮಾಡದಂತೆ ಎಷ್ಟೇ ತೀವ್ರ ಮನವಿ ಮಾಡಿದಾಗ್ಯೂ ಕೇಳದ ಜನರು ಸ್ವೇಚ್ಛೆಯಿಂದ ಓಡಾಡತೊಡಗಿದರು. ಆಗ ಅವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು, ಲಾಠಿಯೇಟಿನ ರುಚಿ ತೋರಿಸುವುದು ಅನಿವಾರ್ಯವಾಯಿತು. ಕೆಲವು ಜಿಲ್ಲೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಜನರಿಗೆ ಬಸ್ಕಿ ಹೊಡೆಸುವ ಶಿಕ್ಷೆ ನೀಡಬೇಕಾಯಿತು. ಇದು ಕೊಂಚ ಅತಿರೇಕದ ಕ್ರಮ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಯಿತು. ಆದರೆ ಹೇಳಿದ ಮಾತನ್ನು ಕೇಳದಿದ್ದರಿಂದ ಈ ಕ್ರಮ ಅನಿವಾರ್ಯವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸಮರ್ಥನೆ ನೀಡಿದರು.

ರಾಜ್ಯದಾದ್ಯಂತ ಲಾಕ್‍ಡೌನ್ ಉಲ್ಲಂಘನೆ ಎಗ್ಗಿಲ್ಲದೆ ಮುಂದುವರಿದಾಗ ಪೊಲೀಸ್ ಇಲಾಖೆ ಜಿಲ್ಲೆಯಿಂದ ಜಿಲ್ಲೆಗೆ ಯಾರೂ ಸಂಚರಿಸದಂತೆ ನಿರ್ಬಂಧ ಹೇರಿತು. ಆವಶ್ಯಕತೆ ಇಲ್ಲದಿದ್ದರೂ ಸಂಚರಿಸುತ್ತಿದ್ದವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಸಂಚಾರ ಅನಿವಾರ್ಯ ಎನಿಸಿದವರಿಗೆ ಪಾಸ್ ನೀಡುವ ಕ್ರಮಗಳನ್ನು ಕೈಗೊಳ್ಳಲಾಯಿತು. ಇವು ದೈನಂದಿನ ಕೆಲವು ದಿನಗಳ ಹಾಗೂ ಕಾಯಂ ಪಾಸ್ ಎಂಬ ವರ್ಗಗಳ ಪಾಸ್‍ಗಳಾಗಿವೆ.

ಜನತೆಯ ರಕ್ಷಣೆಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಗೊಂಡಿರುವ ಕ್ರಮಗಳು ಪ್ರಶಂಸಾರ್ಹವಾಗಿವೆ. ಕೊರೋನಾ ಹಾಟ್‍ಸ್ಪಾಟ್‍ಗಳೆಂದು ಗುರುತಿಸಲಾದ ಕೆಲವು ಪ್ರದೇಶಗಳನ್ನು ಸೀಲ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಿರುವ ಪೊಲೀಸರು ಅವರ ಮೂಲಕ ಕೊರೋನಾ ಬಗ್ಗೆ ಜಾಗೃತಿ ಉಂಟುಮಾಡುತ್ತಿದ್ದಾರೆ. ಸ್ವತಃ ಅಪಾಯಕ್ಕೆ ಗುರಿಯಾಗುವ ಸಾಧ್ಯತೆ ಇದ್ದರೂ ರಾಜ್ಯ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳು ಸ್ತುತ್ಯರ್ಹವಾಗಿವೆ.