ಪೆÇಲೀಸ್ ವಾರ್ತೆ

0
1572

ಪೆÇಲೀಸ್ ಧ್ವಜ ದಿನಾಚರಣೆ

ಏಪ್ರಿಲ್ 2ರಂದು ಕರ್ನಾಟಕ ಪೆÇಲೀಸ್ ಧ್ವಜ ದಿನಾಚರಣೆಯನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಇದು ಕರ್ನಾಟಕ ಪೆÇಲೀಸ್ ಇಲಾಖೆಗೆ ಬಹಳ ಹೆಮ್ಮೆಯ ದಿನ. ಅಂದು ರಾಜ್ಯದ ನಿವೃತ್ತ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಪೆÇಲೀಸ್ ತುಕಡಿಗಳಿಂದ ಚಿತ್ತಾಕರ್ಷಕ ಕವಾಯತು ನಡೆಯಿತು. ಇದು ಎಲ್ಲರನ್ನೂ ಆಕರ್ಷಿಸಿತು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಶ್ರೀ ಕಮಲ್‍ಪಂತ್ ಅವರು ಮುಖ್ಯಮಂತ್ರಿಗಳ ಪದಕ ಪುರಸ್ಕøತ ಸಾಧಕ ಪೆÇಲೀಸರನ್ನು ಅಭಿನಂದಿಸಿದರು. ಇದನ್ನು ಪೆÇಲೀಸ್ ಕಲ್ಯಾಣ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಈ ದಿನದಂದು ನಿವೃತ್ತ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕ್ಷೇಮಾಭಿವೃದ್ಧಿಗಾಗಿ ನಿಧಿ ಸಂಗ್ರಹ ಮಾಡಲಾಗುತ್ತದೆ.

ಸಂವಾದ

ಹೆಡ್‍ಸ್ಕೀಮ್ಸ್ ಎನ್ನುವ ಸ್ವಯಂ ಸೇವಾ ಸಂಘಟನೆ ಸಮವಸ್ತ್ರದಲ್ಲಿನ ಜೀವನದಲ್ಲಿನ ಎದುರಾಗುವ ಸವಾಲುಗಳು ಮತ್ತು ಸಾಧನೆಗಳ ಕುರಿತು ಮಹಿಳಾ ದಿನಾಚರಣೆಯಂದು ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಮಹಿಳಾ ಪೆÇಲೀಸ್ ಮತ್ತು ಗೃಹರಕ್ಷಕದಳದ ಸಿಬ್ಬಂದಿಯೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಬೆಂಗಳೂರು ನಗರ ಪೆÇಲೀಸ್ ಆಯುಕ್ತರು ಪಾಲ್ಗೊಂಡರು.

 

ನಗದು ಪುರಸ್ಕಾರ

ಡಿಸಿಪಿ ಈಶಾನ್ಯ ವಿಭಾಗ ಕಾರ್ಯವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲರ್ (ಮಾದಕ ವಸ್ತುಗಳ ಕಳ್ಳಸಾಗಣೆದಾರರು)ಗಳನ್ನು ಮತ್ತು ಮನೆಗೆ ಕನ್ನ ಕೊರೆದು ಕಳ್ಳತನ ಮಾಡುತ್ತಿದ್ದವರನ್ನು ಮತ್ತು ಚಿನ್ನ ದೋಚುತ್ತಿದ್ದ ದುಷ್ಕರ್ಮಿಗಳನ್ನು ಪೆÇಲೀಸ್ ತಂಡಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ೫೦ ಲಕ್ಷ ರೂ. ಮೌಲ್ಯದ ೧.೨ ಕೆ.ಜಿ. ಚಿನ್ನಾಭರಣಗಳು, ೧೦ ಲಕ್ಷ ರೂ. ಬೆಲೆ ಬಾಳುವ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ. ಪೆÇಲೀಸ್ ಸಿಬ್ಬಂದಿಯ ಈ ಪ್ರಚಂಡ ಪ್ರಯತ್ನಕ್ಕೆ ಒಟ್ಟು ೧,೦೫,೦೦೦ ರೂ.ಗಳ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಸಂಚಾರ ಸಂಪರ್ಕ ದಿವಸ

ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕರೊಂದಿಗೆ ಪೆÇಲೀಸ್ ಅಧಿಕಾರಿಗಳು ವಾಹನ ಸಂಚಾರದ ಕುಂದು-ಕೊರತೆಗಳ ಕುರಿತು `ಸಂಚಾರ ಸಂಪರ್ಕ ದಿವಸ’ದಂದು ಸಂವಾದ ನಡೆಸಿದರು. ಬೆಂಗಳೂರು ನಗರ ಸಂಚಾರ ಪೆÇಲೀಸ್ ವಿಭಾಗದ ಎಲ್ಲ ಅಧಿಕಾರಿಗಳು ಸಾರ್ವಜನಿಕರ ದೂರು-ದುಮ್ಮಾನಗಳನ್ನು ಪರಿಹರಿಸಲು ತಮ್ಮ ತಮ್ಮ ಠಾಣೆಗಳಲ್ಲಿ ಉಪಸ್ಥಿತರಿದ್ದರು.

ವಾರ್ಷಿಕ ಕ್ರೀಡಾಕೂಟ

ಬೆಂಗಳೂರಿನ ಆಡುಗೋಡಿಯ ಸಿಎಆರ್ ಪೆರೇಡ್ ಮೈದಾನದಲ್ಲಿ ಮೂರು ದಿನಗಳ ಬೆಂಗಳೂರು ನಗರ ಪೆÇಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಜರುಗಿತು. ಪಂದ್ಯಾವಳಿಯ ಭಾಗವಾಗಿ ನಡೆದ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಸಿಎಆರ್, ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳ ಪೆÇಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ಶ್ರೀಮತಿ ಚೆನ್ನಮ್ಮ ಬೊಮ್ಮಾಯಿ ಅವರು ಸಮಾರಂಭದಲ್ಲಿ ಪಾಲ್ಗೊಂಡರು.

ಡ್ರಗ್ಸ್ ಪೆಡ್ಲರ್‍ಗಳ ಸೆರೆ

ಬಾಣಸವಾಡಿ ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳ ಹತ್ತಿರ ಮಾದಕ ವಸ್ತುಗಳ ಮಾರಾಟ ಜಾಲ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯೋನ್ಮುಖರಾದ ಪೆÇಲೀಸ್ ತಂಡವು ೭ ವಿದೇಶೀಯರು ಮತ್ತು ಇಬ್ಬರು ಸ್ಥಳೀಯರನ್ನು ಬಂಧಿಸಿತು. ಈ ಕುಖ್ಯಾತ ಮಾದಕ ವಸ್ತು ಕಳ್ಳಸಾಗಣೆದಾರರಿಂದ ಕೊಕೇನ್, ಎಂಡಿಎಂಎ, ಗಾಂಜಾ, ಎಲ್‍ಎಸ್‍ಡಿ ಸ್ಟ್ರಿಪ್‍ಗಳನ್ನೊಳಗೊಂಡಂತೆ ೪ ಕೋಟಿ ರೂ.ಗಳ ಬೆಲೆಯ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಈ ಡ್ರಗ್ಸ್ ಪೆಡ್ಲರ್‍ಗಳು ಉನ್ನತ ಪಾರ್ಟಿಗಳಿಗೆ ಈ ಸಿಂಥೆಟಿಕ್ ಡ್ರಗ್‍ಗಳನ್ನು ಪೂರೈಸುತ್ತಿದ್ದರೆನ್ನಲಾಗಿದೆ. ಈ ಪೆಡ್ಲರ್‍ಗಳ ವೀಸಾ ಅವಧಿ ಮುಗಿದಿದ್ದರೂ ಇವರಿಗೆ ಸೂಕ್ತ ದಾಖಲೆ ಪರಿಶೀಲಿಸದೆ ಅಕ್ರಮವಾಗಿ ವಾಸಿಸಲು ಬಾಡಿಗೆಗೆ ಮನೆ ಕೊಟ್ಟ ಆರೋಪದ ಮೇರೆಗೆ ಮನೆ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ಪ್ರಾಮಾಣಿಕತೆಗೆ ಪ್ರಶಂಸೆ

ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಮೊಬೈಲ್ ಫೆÇೀನ್ ಅನ್ನು ಪೆÇಲೀಸ್ ಆಯುಕ್ತರ ಕಚೇರಿಗೆ ಒಪ್ಪಿಸಿದ ಆಟೋ ಚಾಲಕ ಶ್ರೀಕಂಠಯ್ಯ ಅವರಿಗೆ ಪ್ರಶಂಸಾ ಪತ್ರ ನೀಡಲಾಯಿತು. ಮೊಬೈಲ್ ಫೆÇೀನ್‍ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಲಾಯಿತು.

ಅದೇರೀತಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ನಗದು ಹಣ ಮತ್ತು ಎಟಿಎಂ ಕಾರ್ಡ್‍ಗಳಿದ್ದ ಚೀಲವನ್ನು ಪೆÇಲೀಸ್ ಆಯುಕ್ತರ ಕಚೇರಿಗೆ ತಂದೊಪ್ಪಿಸಿದ ಆಟೋ ಚಾಲಕ  ಫಯಾಜ್  ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಪ್ರಶಂಸಾಪತ್ರ ನೀಡಲಾಯಿತು. ಬಳಿಕ ಚೀಲವನ್ನು ಅದರ ಒಡೆಯರಿಗೆ ಹಸ್ತಾಂತರಿಸಲಾಯಿತು.

ಬಹುಮಾನ

ಬೆಂಗಳೂರು ನಗರ ಪೆÇಲೀಸ್ ಪಶ್ಚಿಮ ವಿಭಾಗದ ಪೆÇಲೀಸ್ ಉಪ ಆಯುಕ್ತರ ಕಚೇರಿ ವ್ಯಾಪ್ತಿಯ ಅನೇಕ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳು/ಅಂಗಡಿಗಳಿಗೆ ಕನ್ನಹಾಕಿ ಕಳ್ಳತನ ಮಾಡುತ್ತಿದ್ದ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೆÇಲೀಸರು ಸೆರೆ ಹಿಡಿದಿದ್ದಾರೆ. ಬಂಧಿತರಿಂದ ಸುಮಾರು ೧.೫ ಕೋಟಿ ರೂ. ಮೌಲ್ಯದ ೨.೯ ಕಿಲೋ ತೂಕದ ಚಿನ್ನಾಭರಣ, ೧.೫ ಕೆ.ಜಿ. ಬೆಳ್ಳಿ, ೧೩ ಪಿಸ್ತೂಲ್‍ಗಳು ಮತ್ತು ೫೨ ಜೀವಂತ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಈ ಸಾಧನೆಗೈದ ಪೆÇಲೀಸ್ ತಂಡ ೧.೧೫ ಲಕ್ಷ ರೂ.ಗಳ ಬಹುಮಾನ ತನ್ನದಾಗಿಸಿಕೊಂಡಿದೆ.

ನೂತನ ಕಚೇರಿ ಉದ್ಘಾಟನೆ

ಬೆಂಗಳೂರಿನ ಉಲ್ಲಾಳದ ಸರ್. ಎಂ. ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಪಶ್ಚಿಮ ಘಟಕದ ನೂತನ ಕಚೇರಿ ಉದ್ಘಾಟನೆ ನಡೆಯಿತು.

ಹಿರಿಯ   ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಹಿಳಾ ಆಪ್ತ ಸಮಾಲೋಚಕರು

ಸಂಕಷ್ಟಪೀಡಿತ ಮಹಿಳೆಯರಿಗೆ ಸಾಂತ್ವನ ನೀಡಿ ಅವರಿಗೆ ಮಾನಸಿಕ ಒತ್ತಾಸೆ ನೀಡುವ ಸಲುವಾಗಿ ಮಹಿಳಾ ಹೆಲ್ಪ್‍ಡೆಸ್ಕ್ ಆಪ್ತಸಮಾಲೋಚಕರು ಯಶಸ್ವೀ ತರಬೇತಿ ಪೂರ್ಣಗೊಳಿಸಿ ೨೦೨೧ರ ಫೆಬ್ರವರಿ ೨೧ ರಂದು ಸೇವೆಗೆ ಸೇರ್ಪಡೆಗೊಂಡರು.

 

 

ವಾಹನ ಕಾರ್ಯಕ್ಷಮತೆ ತಪಾಸಣೆ

ಬೆಂಗಳೂರು ಸಿಟಿ ಪೆÇಲೀಸ್ ಘಟಕದಲ್ಲಿ ಅಹರ್ನಿಶಿ ಕರ್ತವ್ಯನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೊಯ್ಸಳ, ದ್ವಿಚಕ್ರ ವಾಹನಗಳೂ ಸೇರಿದಂತೆ ೨೦೦೦ಕ್ಕಿಂತ ಅಧಿಕ ವಾಹನಗಳ ಸೇವೆಯನ್ನು ಉತ್ತಮಪಡಿಸುವ ಸಲುವಾಗಿ ಈ ವಾಹನಗಳ ದಕ್ಷತೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ತಪಾಸಣಾ ಕಾರ್ಯಕ್ರಮವನ್ನು ಅಧಿಕಾರಿಗಳ ತಂಡದಿಂದ ಹಮ್ಮಿಕೊಳ್ಳಲಾಗಿದೆ.

ಪೆÇ್ರೀತ್ಸಾಹ ಧನ

ಬೆಂಗಳೂರು ನಗರ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ೧೫೭ ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದ ಸಾಧನೆ ಮಾಡಿದ್ದಾರೆ. ಇವರನ್ನು `ದಿ ಲರ್ನಿಂಗ್ ಸೊಸೈಟಿ’ಯು ಪೆÇ್ರೀತ್ಸಾಹ ಧನ ನೀಡಿ ಗೌರವಿಸಿತು. ಸಂಸ್ಥೆಯ ಈ ಕ್ರಮಕ್ಕೆ ಬೆಂಗಳೂರು ನಗರ ಪೆÇಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಐಪಿಎಸ್‍ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಲಸಿಕೆ

ಆರೋಗ್ಯ ರಕ್ಷಣೆಯ ಹೀರೋಗಳಿಗೆ ಕೋವಿಡ್-೧೯ರ ಲಸಿಕೆ ನೀಡಿಕೆ ಅಭಿಯಾನ ಆರಂಭವಾಯಿತು. ಪೆÇಲೀಸ್ ಸಿಬ್ಬಂದಿಗಳು ಆದಷ್ಟು ಬೇಗ ಕೋವಿಡ್ ಲಸಿಕೆ ಪಡೆಯಲು ಸೂಚಿಸಲಾಯಿತು.

ಹೊಸ ಹೆಲ್ಪ್‍ಡೆಸ್ಕ್ ಉದ್ಘಾಟನೆ

ಕೆ.ಜಿ. ಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಥಮ ಮಹಿಳಾ ಹೆಲ್ಪ್‍ಡೆಸ್ಕ್ ಅನ್ನು ಉದ್ಘಾಟಿಸಲಾಯಿತು. ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ಈ ಬಗೆಯ ಧ್ಯೇಯೋದ್ದೇಶ ಇದೇ ಪ್ರಥಮವಾಗಿದೆ. ತನ್ಮೂಲಕ ಬೆಂಗಳೂರು ನಗರ ಪೆÇಲೀಸರು ಮಹಿಳೆಯರಿಗೆ ಒಂದು ಸುರಕ್ಷಿತ ಮತ್ತು ಸುಭದ್ರ ವಾತಾವರಣವನ್ನು ಸೃಷ್ಟಿಸುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

ಮಾಸಿಕ ಜಲ ಸಂಪರ್ಕ ದಿವಸ

ಮೂರನೆಯ ಮಾಸಿಕ ಜಲಸಂಪರ್ಕ ದಿವಸ ಕಾರ್ಯಕ್ರಮ ನಗರದ ಕುಮಾರಸ್ವಾಮಿ ಲೇಔಟ್ ಪೆÇಲೀಸ್ ಠಾಣೆಯಲ್ಲಿ ನಡೆಯಿತು.  ನಗರದ

ವಿವಿಧ ಠಾಣೆಗಳಲ್ಲಿಯೂ ಇನ್‍ಸ್ಪೆಕ್ಟರ್‍ಗಳೂ ಸೇರಿದಂತೆ ಸಕಲ ಹಿರಿಯ ಅಧಿಕಾರಿಗಳು  ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದು-ಕೊರತೆಗಳ ಬಗ್ಗೆ ಚರ್ಚೆ ನಡೆಸಿದರು.

ಸಂಚಾರಿ ಸಂಪರ್ಕ ದಿನ ಯಶಸ್ವಿ

ರಾಜಾಜಿನಗರ ಸಂಚಾರ ಪೆÇಲೀಸ್ ಠಾಣೆಯಲ್ಲಿ `ಸಂಚಾರಿ ಸಂಪರ್ಕ ದಿವಸ’ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ನಗರದ ಸಂಚಾರ ಕುರಿತಂತೆ ಸಾರ್ವಜನಿಕರ ಜೊತೆ ಚರ್ಚಿಸಲಾಯಿತು. ಸಲಹೆ-ಸೂಚನೆಗಳನ್ನು ಪಡೆಯಲಾಯಿತು.

ಅಂತಾರಾಜ್ಯ ಗ್ಯಾಂಗ್‍ನ ಸೆರೆ

ಭಾರಿ ಕಾರ್ಯಾಚರಣೆ ನಡೆಸಿದ ಪೆÇಲೀಸ್ ತಂಡವು ನಗರದ ಅನೇಕ ಠಾಣಾ ವ್ಯಾಪ್ತಿಯಲ್ಲಿನ ೩೫ ಪ್ರಕರಣಗಳ ಆರೋಪಿಗಳಿಬ್ಬರನ್ನು ಬಂಧಿಸಿತು. ಇವರಿಬ್ಬರೂ ಸರಣಿ ಕನ್ನಗಳ್ಳತನ ಎಸಗುತ್ತಿದ್ದ ಅಂತಾರಾಜ್ಯ ಗ್ಯಾಂಗ್‍ನ ಸದಸ್ಯರೆನ್ನಲಾಗಿದ್ದು, ಬಂಧಿತರಿಂದ ೨.೨ ಕೋಟಿ ರೂ. ಬೆಲೆಯ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಾಹಸ ಕೈಗೊಂಡ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡಕ್ಕೆ ೭೫೦೦೦ ರೂ. ನಗದು ಬಹುಮಾನ ನೀಡಲಾಯಿತು.

ಸಂಚಾರಿ ಕ್ಯಾಬಿನ್‍ಗಳು

ಟೌನ್‍ಹಾಲ್‍ನಲ್ಲಿ ಯಶಸ್ವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಬಿ.ಐ.ಎ.ಎಲ್. ಕೊಡಮಾಡಿದ ಏಳು ಸಂಚಾರಿ ಕ್ಯಾಬಿನ್‍ಗಳನ್ನು ಪೆÇಲೀಸರಿಗೆ ಉಚಿತವಾಗಿ ಹಸ್ತಾಂತರಿಸಲಾಯಿತು. ಬಿಸಿಲು, ಮಳೆಯಿಂದ ಪೆÇಲೀಸರು ರಕ್ಷಣೆ ಪಡೆಯಲು ಈ ಕ್ಯಾಬಿನ್‍ಗಳು ನೆರವಾಗುತ್ತವೆ ಮತ್ತು ಪುನಶ್ಚೆ ೈತನ್ಯ ಪಡೆದು ಪೆÇಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಇವು ಇಂಬು ನೀಡುತ್ತವೆ.

ಸಂಚಾರ-ಸಂವಾದ

ವೈಟ್‍ಫೀಲ್ಡ್  ಸಂಚಾರಿ ಪೆÇಲೀಸ್ ಠಾಣೆಯಲ್ಲಿ `ಸಂಚಾರ ಸಂಪರ್ಕ ದಿವಸ’ದ ನಿಮಿತ್ತ   ಬೆಂಗಳೂರು ನಾಗರಿಕರ ಜೊತೆಗೆ ಸಂಚಾರ ಸಮಸ್ಯೆ ಕುರಿತಂತೆ ಚರ್ಚೆ ನಡೆಸಲಾಯಿತು.

ವಾಹನ   ದಟ್ಟಣೆ, ರಸ್ತೆಯುದ್ದಕ್ಕೂ ವಾಹನಗಳ ನಿಲುಗಡೆ, ರಸ್ತೆಗುಂಡಿಗಳು, ಪಾದಚಾರಿ  ಮಾರ್ಗದ ಅತಿಕ್ರಮಣ,  ವಾಟರ್ ಟ್ಯಾಂಕರ್‍ಗಳ ಅಡ್ಡಾದಿಡ್ಡಿ ಚಾಲನೆ, ಬಿಎಂಟಿಸಿ ಬಸ್‍ಗಳ ಅಸಮರ್ಪಕ ನಿಲುಗಡೆ ಸೇರಿದಂತೆ ನಾಗರಿಕರ ಎಲ್ಲಾ ದೂರು-ದುಮ್ಮಾನಗಳನ್ನು ಪರಿಹರಿಸುವುದಾಗಿ ಭರವಸೆ ನೀಡಲಾಯಿತು.

ಬಹುಮಾನ ನೀಡಿಕೆ

ನಗರದ ಐದು ಪೆÇಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿಶುಗಳವು, ವನ್ಯಜೀವಿಗಳ ಅಕ್ರಮ ಸಾಗಾಟ, ದ್ವಿಚಕ್ರ ವಾಹನಗಳ ಕಳ್ಳತನವೇ ಮೊದಲಾದ ಪ್ರಕರಣಗಳ ಆರೋಪಿಗಳನ್ನು ದಸ್ತಗಿರಿ ಮಾಡಿ ವಸ್ತುಗಳನ್ನು ವಶಪಡಿಸಿಕೊಂಡ ಸಾಧನೆಗಾಗಿ ೧.೭೫ ಲಕ್ಷ ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಶ್ಲಾಘನೆ

ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್‍ಗಳನ್ನು ಬಂಧಿಸಿ ಸುಮಾರು ೨೩,೮೦,೦೦೦ ರೂ.ಗಳ ಮೌಲ್ಯದ ಗಾಂಜಾ ಮತ್ತು ಇತರ ಮಾದಕ ಪದಾರ್ಥಗಳನ್ನು ಜಪ್ತಿ ಮಾಡಿದ ಮೈಕೋಲೇಔಟ್ ಪೆÇಲೀಸ್ ಸಿಬ್ಬಂದಿಯ ಸಾಹಸವನ್ನು ಮೆಚ್ಚಿ ಬೆಂಗಳೂರು ನಗರ ಪೆÇಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಐಪಿಎಸ್ ರವರು ಈ ತಂಡಕ್ಕೆ ಪ್ರಶಂಸಾ ಪತ್ರ ಮತ್ತು ೪೦,೦೦೦ ರೂ.ಗಳ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

ಕನ್ನಗಳ್ಳರ ಸೆರೆ

ಅಶೋಕನಗರ ಠಾಣೆಯ ಪೆÇಲೀಸ್ ಸಿಬ್ಬಂದಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಬೆಂಗಳೂರು ಮತ್ತು ಸುತ್ತಲ ಸ್ಥಳಗಳಲ್ಲಿ ಕನ್ನಗಳ್ಳತನವನ್ನೇ ರೂಢಿಸಿಕೊಂಡಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ಬಂಧಿಸಿ ೨.೧೨ ಕೋಟಿ ರೂ. ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ತಂಡದ ಕಾರ್ಯವನ್ನು ಶ್ಲಾಘಿಸಿ ೭೫,೦೦೦ ರೂ. ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.

ಪದಗ್ರಹಣ ಸಮಾರಂಭ

ಸಂಚಾರ ವಿಭಾಗದ ಜಂಟಿ ಪೆÇಲೀಸ್ ಆಯುಕ್ತರ ಸಮ್ಮುಖದಲ್ಲಿ ಸಿಎಆರ್ ಪೆರೇಡ್ ಮೈದಾನದಲ್ಲಿ ಟ್ರಾಫಿಕ್ ತಂಡದ ಪದಗ್ರಹಣ ಸಮಾರಂಭದ ಉದ್ಘಾಟನೆ ನಡೆಯಿತು. ತಂಡಕ್ಕೆ ಪ್ರಮಾಣ ವಚನ ಬೋಧನೆ, ಪ್ರಮಾಣ ಪತ್ರ ವಿತರಣೆ ನಡೆಯಿತು.

ಪ್ರತಿಜ್ಞಾ ಸ್ವೀಕಾರ

ಪೆÇಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಭ್ರಷ್ಟಾಚಾರ ನಿರ್ಮೂಲನೆಗಾಗಿ ಜಾಗೃತಿ ಅರಿವು ಸಪ್ತಾಹ 2020’ರ ನಿಮಿತ್ತ ಪ್ರತಿಜ್ಞಾ ವಿಧಿಯ ಸ್ವೀಕಾರ ನಡೆಯಿತು.