ಕೊರೋನಾ 2ನೇ ಅಲೆ:  ಪೆÇಲೀಸರ ಹೋರಾಟ

0
1313

ಕೊರೋನಾ ವೈರಸ್ ಡಿಸೀಸ್ ಅಥವಾ ಕೋವಿಡ್-೧೯ ಎಂಬ ಹೆಮ್ಮಾರಿ ಕಳೆದ ವರ್ಷ ಜಗತ್ತಿನ ಮೇಲೆ ಎರಗಿ ತನ್ನ ರುದ್ರನರ್ತನವನ್ನು ಆರಂಭಿಸಿತು. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಈ ರೋಗಾಣು ನಂತರ ಜಗತ್ತಿನೆಲ್ಲೆಡೆ ಹರಡಿ ತನ್ನ ರೂಪಗಳನ್ನು ಬದಲಿಸಿಕೊಳ್ಳುತ್ತಲೇ ಸಾಗಿದ್ದು, ವೈದ್ಯಲೋಕಕ್ಕೆ ಬೃಹತ್ ಸವಾಲನ್ನೊಡ್ಡಿದೆ. ಅಮೆರಿಕ, ಯೂರೋಪ್‍ಗಳಲ್ಲಿ ಪ್ರಾರಂಭದಲ್ಲಿ ಭಾರಿ ಸಾವು-ನೋವಿಗೆ ಕಾರಣವಾದ ಕೊರೋನಾ ಅನಂತರ ಜಗತ್ತಿನ ಸಕಲ ರಾಷ್ಟ್ರಗಳಲ್ಲಿಯೂ ಕೇಕೆ ಹಾಕಿತು.

ಭಾರತದಂತಹ ಅತ್ಯಧಿಕ ಜನಸಂಖ್ಯೆ ಮತ್ತು ಅತ್ಯಧಿಕ ಜನಸಾಂದ್ರತೆ ಇರುವ ದೇಶದಲ್ಲಿಯೂ ಕೊರೋನಾ ತನ್ನ ವಿಧ್ವಂಸಕ ಕಾರ್ಯ ಪ್ರಾರಂಭಿಸಿತು. ಶುರುವಿನಲ್ಲಿ ವಯೋವೃದ್ಧರು, ಅದರಲ್ಲಿಯೂ ವಿವಿಧ ಕಾಯಿಲೆಗಳಿಂದ ಬಳಲುವವರನ್ನೇ ಬಲಿ ಪಡೆಯಲಾರಂಭಿಸಿದ ಕೊರೋನಾ ಅನಂತರ ವಯೋಭೇದ ಮರೆತು ಮಾರಣಹೋಮ ನಡೆಸತೊಡಗಿತು.

ಕಳೆದ ವರ್ಷ ಕೊರೋನಾಗೆ ಲಸಿಕೆಯಾಗಲಿ ಔಷಧವಾಗಲಿ ಲಭ್ಯವಿರಲಿಲ್ಲ. ಮಲೇರಿಯಾಕ್ಕೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನೇ ಇದಕ್ಕೂ ನೀಡಲು ಶುರುವಾಯಿತು. ಅನಂತರ ರೆಮ್‍ಡಿಸಿವಿರ್ ಔಷಧಿü ಕೊರೋನಾಕ್ಕೆ ಪರಿಣಾಮಕಾರಿ ಎಂದು ಕಂಡುಬಂದಿತು.

ಕೆಲವರಿಗೆ ಲಕ್ಷಣರಹಿತ ಸೋಂಕು ಕಂಡುಬಂದರೆ ಇನ್ನು ಹಲವರಿಗೆ ರೋಗ ಲಕ್ಷಣಗಳು ಬಾಧಿಸಿದವು. ಕೆಲವರಿಗೆ ಸಾಂಸ್ಥಿಕ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬೇಕಾಯಿತು. ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಯಿತು. ಚಿಕಿತ್ಸೆ ಫಲಿಸದೆ ಸಾವಿರಾರು ಮಂದಿ ಸಾವಿಗೀಡಾದರು. ಲಕ್ಷಾಂತರ ಮಂದಿ ಸೋಂಕಿಗೊಳಗಾದರು. ಕರ್ನಾಟಕದ ಕಲಬುರಗಿಯಲ್ಲಿ ದೇಶದ ಮೊದಲ ಕೊರೋನಾ ಸಾವು ಸಂಭವಿಸಿತು. ಕಾಯಿಲೆ ಪ್ರಸರಣ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಹೇರಲಾಯಿತು. ಇದರಿಂದ ಆರ್ಥಿಕವಾಗಿ ಜನತೆಗೆ ಸಂಕಷ್ಟವಾಯಿತು. ಅದೇ ವೇಳೆ ಕೊರೋನಾದ ಪ್ರಸರಣ ಸಹ ನಿಯಂತ್ರಣಕ್ಕೆ ಬಂದಿತು. ಈ ಹಿನ್ನೆಲೆಯಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಯಿತು.

ಕೊರೋನಾ ಕೇವಲ ನಿಯಂತ್ರಣಕ್ಕಷ್ಟೇ ಬಂದಿದ್ದರೂ ಜನತೆ ಅದು ಹೋಗಿಯೇಬಿಟ್ಟಿತು ಎಂಬಂತೆ ನಿರ್ಲಕ್ಷ್ಯ ವಹಿಸಿದರು. ಸಭೆ-ಸಮಾರಂಭಗಳಲ್ಲಿ ಜನದಟ್ಟಣೆ ಅಧಿಕವಾಯಿತು. ಚುನಾವಣಾ ರ್ಯಾಲಿಗಳು, ಪ್ರತಿಭಟನಾ ಮೆರವಣಿಗೆಗಳು, ಜಾತ್ರೆ, ಉತ್ಸವಗಳು ಬೀಡುಬೀಸಾಗಿ ನಡೆಯತೊಡಗಿದವು. ಜನರು  ಮಾಸ್ಕ್‍ಅನ್ನು ಸರಿಯಾಗಿ ಧರಿಸಲಿಲ್ಲ, ಸಾಮಾಜಿಕ ಅಂತರವನ್ನು ಸಮರ್ಪಕವಾಗಿ ಪಾಲಿಸಲಿಲ್ಲ. ಸ್ಯಾನಿಟೈಸರ್ ಬಳಕೆಯನ್ನಂತೂ ಮರೆತೇಹೋದಂತೆ ವರ್ತಿಸಿದರು. ಇದೆಲ್ಲದರ ಪರಿಣಾಮವಾಗಿ ಕೊರೋನಾದ ಎರಡನೇ ಅಲೆ ನಾಡಿಗೆ ಅಪ್ಪಳಿಸಿತು.

ಈ ಬಾರಿ ಹಿಂದೆಂದಿಗಿಂತ ತೀವ್ರವಾಗಿ ಕಾಡಿದ ಕೊರೋನಾ ಸಹಸ್ರಾರು ಜನರ ಪ್ರಾಣ ಕಸಿಯಿತು. ಈ ಎರಡನೇ ಅಲೆಯಲ್ಲಿ ಅಪಾರ ನಡುವಯಸ್ಕರು ಮತ್ತು ವಯೋವೃದ್ಧರ ಜೊತೆಗೆ ಯುವಜನರೂ ಪ್ರಾಣ ಕಳೆದುಕೊಂಡರು. ಆಸ್ಪತ್ರೆಗಳು ತುಂಬಿ ತುಳುಕಿ ರೋಗಳಿಗೆ ಹಾಸಿಗೆಯ ಕೊರತೆ ಉಂಟಾಯಿತು. ಆಮ್ಲಜನಕ ಸಹಿತ ಹಾಸಿಗೆ, ವೆಂಟಿಲೇಟರ್‍ಗಳಿಗಂತೂ ಹಾಹಾಕಾರ ಉಂಟಾಯಿತು. ಈ ಹಿನ್ನೆಲೆಯಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಶುರುವಾಯಿತು ಎಂಬ ಆರೋಪಗಳು ಕೇಳಿಬಂದವು.

ಇದೇ ವೇಳೆ ಈ ವರ್ಷದ ಆರಂಭದಲ್ಲಿ ಕೊರೋನಾಗೆ ಲಸಿಕೆ ಸಂಶೋಧನೆಗೊಂಡದ್ದು ಭಾರಿ ಆಶಾವಾದ ಮೂಡಿಸಿತು. ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಫುಟಿಕ್-ವಿ ಮುಂತಾದ ಲಸಿಕೆಗಳು ಕೊರೋನಾದ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರಕ್ಷಣೆ ನೀಡುವುದು ಸಾಬೀತಾಗಿದ್ದರಿಂದ ಭಾರತದಾದ್ಯಂತ ಲಸಿಕಾ ಅಭಿಯಾನ ಆರಂಭಿಸಲಾಯಿತು. ಕರ್ನಾಟಕ ರಾಜ್ಯವು ಲಸಿಕೆ ನೀಡಿಕೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು  ಉತ್ತಮ ಸಂಗತಿಯಾಗಿದೆ.

ಈ ನಡುವೆ ಕೊರೋನಾದಿಂದ ಚೇತರಿಕೆ ಕಂಡವರಿಗೆ ಅದರಲ್ಲೂ ಮಧುಮೇಹ ನಿಯಂತ್ರಣದಲ್ಲಿರದವರಿಗೆ `ಬ್ಲಾಕ್ ಫಂಗಸ್’ ಅಥವಾ `ಕಪ್ಪು ಶಿಲೀಂಧ್ರ ರೋಗ’ ಕಾಣಿಸಿಕೊಳ್ಳಲಾರಂಭಿಸಿದ್ದು, ಅನೇಕರು ದೃಷ್ಟಿ ಕಳೆದುಕೊಂಡು ಇತರ ಅನೇಕರು ಮರಣಕ್ಕೀಡಾದದ್ದು ಆತಂಕ ಮೂಡಿಸಿತು.

ಕೊರೋನಾ ಎರಡನೇ ಅಲೆಯಿಂದ ಮರಣಿಸಿದವರ ಶವಗಳ ಅಂತ್ಯ ಸಂಸ್ಕಾರಕ್ಕೆ ಸ್ಮಶಾನಗಳ ಮುಂದೆ ಶವ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದ್ದು ಸನ್ನಿವೇಶದ ಭೀಕರತೆಯನ್ನರುಹುತ್ತದೆ.

ಎರಡನೇ ಅಲೆಯ ಪ್ರಾರಂಭಕ್ಕೆ ಮುನ್ನ ಲಸಿಕೆ ನೀಡಿಕೆ ಶುರುವಾಗಿದ್ದರೂ ಅಡ್ಡ ಪರಿಣಾಮಗಳಾಗಬಹುದು ಅಥವಾ ಲಸಿಕೆಯಿಂದಲೇ ಕೊರೋನಾ ತಗಲಬಹುದು ಎಂಬ ತಪ್ಪು ಗ್ರಹಿಕೆ ಮತ್ತು ತಿಳಿವಳಿಕೆಯ ಕೊರತೆಯಿಂದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಆದರೆ ಕೊರೋನಾ ತೀವ್ರವಾಗಿ ಬಾಧಿಸಲಾರಂಭಿಸಿದ ನಂತರ ಲಸಿಕೆ ಪಡೆಯುವ ಅನಿವಾರ್ಯತೆ ಮನವರಿಕೆಯಾದ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ನೂಕುನುಗ್ಗಲು ಉಂಟಾಯಿತು. ಆದರೆ ಮೊದಮೊದಲು ಜನರು ಅಷ್ಟಾಗಿ ಲಸಿಕೆ ಪಡೆಯಲು ಮುಂದೆ ಬರದಿದ್ದ ಕಾರಣ ಲಸಿಕೆ ತಯಾರಿಕೆ ಕಡಿಮೆಯಾಗಿದ್ದು ಲಸಿಕೆಯ ಕೊರತೆಗೆ ಸಾಕ್ಷಿಯಾಯಿತು. ಕೆಲವೆಡೆ ಲಸಿಕೆಗೆ ಹಾಹಾಕಾರವೇ ಉಂಟಾಯಿತು.

ಕೊರೋನಾ ಎರಡನೇ ಅಲೆಯ ಹರಡುವಿಕೆ ತೀವ್ರವಾದ ಕಾರಣ ಸರ್ಕಾರ ರಾಜ್ಯದಾದ್ಯಂತ ಲಾಕ್‍ಡೌನ್ ಮಾಡಿತು. ಸುಮಾರು ಎರಡು ತಿಂಗಳ ಲಾಕ್‍ಡೌನ್ ಬಳಿಕ ಕೊರೋನಾ ನಿಯಂತ್ರಣಕ್ಕೆ ಬರತೊಡಗಿತು. ಈ ಹಿನ್ನೆಲೆಯಲ್ಲಿ ೧೧ ಜಿಲ್ಲೆಗಳನ್ನು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಹಂತಹಂತವಾಗಿ ಲಾಕ್‍ಡೌನ್ ತೆರವುಗೊಳಿಸಲಾಯಿತು. ಅನಂತರ ಎಲ್ಲ ಜಿಲ್ಲೆಗಳಲ್ಲೂ ಭಾಗಶಃ ಅನ್‍ಲಾಕ್ ಘೋಷಿಸಲಾಯಿತು.

ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಕೊರೋನಾ ವಾರಿಯರ್ಸ್ ಎಂಬ ಬಿರುದು ಗಳಿಸಿದರು. ಇವರ ಜೊತೆಗೆ ಪತ್ರಕರ್ತರನ್ನೂ ಫ್ರಂಟ್‍ಲೈನ್ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಲಾಯಿತು. ಆದರೆ ಇವರ ಜೊತೆಗೆ ಕೊರೋನಾ ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತು ಅಗಾಧವಾಗಿ ಶ್ರಮಿಸಿದ್ದು ಇನ್ನೂ ಶ್ರಮಿಸುತ್ತಲೇ ಇರುವುದು ಪೆÇಲೀಸ್ ಇಲಾಖೆ. ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅವಿಶ್ರಾಂತವಾಗಿ ಕೊರೋನಾ ನಿಯಂತ್ರಣಕ್ಕಾಗಿ ದುಡಿಯುತ್ತಿದ್ದಾರೆ. ಅನೇಕ ಪೆÇಲೀಸರು ಈ ವೇಳೆ ಪ್ರಾಣತ್ಯಾಗ ಕೂಡ ಮಾಡಿದ್ದಾರೆ. ಅಂಥ ಕೊರೋನಾ ವೀರರ ಕೆಲವು ಸಂಗತಿಗಳು ಇಲ್ಲಿವೆ.

ಮೊದಲನೆಯದಾಗಿ ಪ್ರಥಮ ಲಾಕ್‍ಡೌನ್ ವೇಳೆ ಪೆÇಲೀಸರು ಮಾಡಿದ ಸ್ತುತ್ಯರ್ಹ ಸೇವೆ ಕಂಡು ಪೆÇಲೀಸರ ಬಗ್ಗೆ ಇದ್ದ ಭಯ ನಿವಾರಣೆಯಾಗಿ ಸ್ನೇಹಭಾವನೆ ಒಡಮೂಡಿತು. ವಲಸಿಗರಿಗೆ ಪೆÇಲೀಸ್ ಠಾಣೆಗಳ ವತಿಯಿಂದಲೇ ಊಟ ತಿಂಡಿ ವ್ಯವಸ್ಥೆ ಮಾಡಿಕೊಟ್ಟರು. ಬೀದಿಬದಿ ನಿರ್ಗತಿಕರಿಗೆ ಊಟ ಕೊಟ್ಟು ಸಲಹಿದರು. ವಾಟ್ಸ್‍ಆ್ಯಪ್ ಗ್ರೂಪ್‍ಗಳನ್ನು ಸೃಷ್ಟಿಸಿಕೊಂಡು ಆಯಾ ಪ್ರದೇಶಗಳ ಜನರನ್ನು ಸೇರಿಸಿಕೊಂಡು ಯಾರು ಅಪಾಯದಲ್ಲಿದ್ದಾರೆ, ಯಾರಿಗೆ ದಿನಸಿ ಅಗತ್ಯವಿದೆ ಎಂಬುದನ್ನು ಕಂಡುಕೊಂಡು ಅವರಿಗೆ ಆಹಾರದ ಕಿಟ್‍ಗಳನ್ನು ತಲುಪಿಸುವ ಕೆಲಸವನ್ನು ಪೆÇಲೀಸರೇ ಮಾಡಿದರು.

ಹೊಯ್ಸಳ ವಾಹನಗಳನ್ನು ತುರ್ತು ಉದ್ದೇಶಗಳಿಗೆ, ಗರ್ಭಿಣಿಯರಿಗೆ, ವಯೋವೃದ್ಧರ ಸಾಕಷ್ಟು ಸಮಯಗಳಿಗೆ ಬಳಸಿಕೊಂಡು ಅಂಥವರನ್ನೆಲ್ಲ ಹೊಯ್ಸಳ ವಾಹನಗಳಲ್ಲೇ ಕರೆದೊಯ್ದು ಸಹಾಯ ಮಾಡಿದರು. ಯಾರು ಎಷ್ಟೇ ಪ್ರಭಾವಗಳನ್ನು ಬೀರಿದರೂ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಿದರು. ತುರ್ತು ಅಗತ್ಯಗಳಿದ್ದವರಿಗೆ ಸಹಾಯವನ್ನೂ ನೀಡಿದರು.

ಇದರ ಜೊತೆಗೆ ಪೆÇಲೀಸ್ ಮೇಲಧಿಕಾರಿಗಳು ತಮ್ಮ ಸಿಬ್ಬಂದಿಯಲ್ಲಿ ನೈತಿಕ ಸೆÉ್ಥೈರ್ಯ ತುಂಬಿ ಅವರಿಗೆ ಸಾಕಷ್ಟು ಪೆÇ್ರೀತ್ಸಾಹ ನೀಡಿದ್ದಾರೆ.

ಅನೇಕ ಪೆÇಲೀಸರು ಹಲವಾರು ಶವಗಳ ಅಂತ್ಯಸಂಸ್ಕಾರ ಕಾರ್ಯವನ್ನು ನಿರ್ವಹಿಸಿದ್ದಾರೆ. ಸಾಕಷ್ಟು ಬೀದಿಗಿಳಿದು ಕೊರೋನಾದಿಂದ ಏನೇನು ಸಮಸ್ಯೆಗಳಾಗುತ್ತವೆ ಎಂದು ಹಾಡುಗಳ ಮೂಲಕ ವಾಟ್ಸ್‍ಆ್ಯಪ್ ವಿಡಿಯೋ ಮೂಲಕ ಜಾಗೃತಿ ಮೂಡಿಸಿದರು. ಜನರಲ್ಲಿ ಪೆÇಲೀಸರ ಬಗ್ಗೆ ಮೃದುಭಾವನೆ, ಸದ್ಭಾವನೆ ಬೆಳೆದು ಎಷ್ಟೋ ಮಂದಿ ಪೆÇಲೀಸರಿಗೆ ಮನೆಯಿಂದಲೇ ಊಟ ನೀಡಿದ್ದಾರೆ.

ಅನಿವಾರ್ಯ ಬಂದ ಕಡೆ ಪೆÇಲೀಸರು ಲಾಠಿ ಪ್ರಹಾರ ಮಾಡಿ ಜನರನ್ನು ಎಚ್ಚರಿಸಿದ್ದಾರೆ. ಕೆಲವೆಡೆ ಕೊರೋನಾ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ಕೈಮುಗಿದು ಬೇಡಿಕೊಂಡ ಉದಾಹರಣೆಗಳೂ ಇವೆ.

ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಏರ್ಪಡಿಸಿ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ.

ಎರಡನೇ ಅಲೆಯಲ್ಲಿ ಬಹಳ ಜನ ಉಸಿರಾಟದ ತೊಂದರೆ ಇತ್ಯಾದಿಗಳಿಂದ ಬಳಲಾರಂಭಿಸಿದ ಬಳಿಕ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆಗಳು ಶುರುವಾದವು.

ಸಂಸದ ತೇಜಸ್ವಿ ಸೂರ್ಯ ಅವರು ಆಸ್ಪತ್ರೆಗಳಲ್ಲಿ ಬೆಡ್‍ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಪೆÇಲೀಸರ ನೆರವು ಪಡೆದು ಹಲವಾರು ಜನರನ್ನು ವಿಚಾರಣೆಗೆ ಗುರಿಪಡಿಸಿದರು. ರೋಗಿಗಳಿಗೆ ಹಾಸಿಗೆ ಕಾದಿರಿಸುವ ನಿಟ್ಟಿನಲ್ಲಿ ಅಕ್ರಮಗಳು ನಡೆಯುತ್ತಿರುವ ವಿಚಾರವನ್ನು ಬಯಲಿಗೆಳೆದರು. ಈ ವಿಚಾರದಲ್ಲಿ ಪೆÇಲೀಸರು ಅಗಾಧ ಶ್ರಮವಹಿಸಿ ಸಂಸದರಿಗೆ ನೆರವು ನೀಡಿದರು.

ಇದರ ಜೊತೆಗೆ ರೆಮ್‍ಡಿಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಜಾಲವನ್ನು ಭೇದಿಸಿದರು.

ಈ ಅಕ್ರಮ ಜಾಲ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿತು. ಜೊತೆಗೆ ಕೆಲವು ವೈದ್ಯರು-ನರ್ಸ್‍ಗಳು ಸೇರಿ ಲಸಿಕೆಯನ್ನು ಖಾಸಗಿಯಾಗಿ ಹಣ ಪಡೆದು ನೀಡುತ್ತಿರುವ ಮೋಸದ ಜಾಲವನ್ನೂ ಬಯಲಿಗೆಳೆದರು. ಕೆಲವು ಆಮ್ಲಜನಕದ ಪೂರೈಕೆಯಲ್ಲಿಯೂ ಅಕ್ರಮ ಎಸಗುತ್ತಿರುವುದನ್ನು ಪತ್ತೆ ಮಾಡಿದರು. ಆಮ್ಲಜನಕದ ಕಳ್ಳದಂಧೆ ಮಾಡುವ ಅನೇಕರನ್ನು ಸೆರೆ ಹಿಡಿದರು.

ಈ ಅವಧಿಯಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಅಕ್ರಮ ಎಸಗುವವರು ಯುವಕರನ್ನು ಪರಿಚಯ ಮಾಡಿಕೊಂಡು ಅವರಿಗೆ ಯುವತಿಯರನ್ನು ಪರಿಚಯಿಸಿ ಅವರ ಮೂಲಕ ಸೆಕ್ಸ್‍ಟಾರ್ಷನ್ ಮಾಡಿ ಸುಲಿಗೆ ಮಾಡುವ ಜಾಲ, ಫೇಸ್‍ಬುಕ್‍ನಲ್ಲಿ ಗೆಳೆತನ ಮಾಡಿಕೊಂಡು ಬೇರೆಯವರ ಹೆಸರಿನಲ್ಲಿ ಫೇಸ್‍ಬುಕ್ ಖಾತೆ ಹ್ಯಾಕ್ ಮಾಡಿ ಹಣ ಲಪಟಾಯಿಸುವ ದಂಧೆಕೋರರನ್ನೂ ಬಂಧಿಸಿದರು.

ಆಸ್ಪತ್ರೆಗಳ ಜೊತೆಗೆ ಸಹಕಾರ ನೀಡಿ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳನ್ನು ಸ್ಥಾಪಿಸುವಲ್ಲಿ ಪೆÇಲೀಸರ ಪಾತ್ರ ಹಿರಿದು.

ಕೋವಿಡ್ ಲಸಿಕೆ ಪಡೆಯಲು ಜನರು ಪ್ರತಿಯೊಂದು ಆಸ್ಪತ್ರೆ ಮತ್ತು ಲಸಿಕಾ ಕೇಂದ್ರಗಳಿಗೆ ಮುಗಿಬಿದ್ದರು. ೨೦೦ ಜನ ಲಸಿಕೆ ಪಡೆಯುವಲ್ಲಿ ಎರಡು ಸಾವಿರದಷ್ಟು ಜನರು ಜಮಾಯಿಸಲಾರಂಭಿಸಿದರು. ಈ ಜನಜಂಗುಳಿಯನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸ ಪಟ್ಟರು.

ಇದಲ್ಲದೆ ಮಾದಕ ವಸ್ತುಗಳ ಕಳ್ಳದಂಧೆಯನ್ನು ಪತ್ತೆಹಚ್ಚಿ ದಮನ ಮಾಡುವಲ್ಲಿ ಸಿಸಿಬಿ ನಾರ್ಕೋಟಿಕ್ಸ್ ದಳದವರು ಅಪಾರ ಶ್ರಮ ವಹಿಸಿದರು.

ಲಾಕ್‍ಡೌನ್ ಆದಾಗ ಇಡೀ ದಿನ ಮನೆಯಲ್ಲೇ ಇರುವ ಅನೇಕರಿಗೆ ಮಾನಸಿಕ ಸಮಸ್ಯೆಗಳುಂಟಾಗಿ ಕೌಟುಂಬಿಕ ಕಲಹಗಳು ಮತ್ತು ಕೌಟುಂಬಿಕ ಹಿಂಸೆ-ದೌರ್ಜನ್ಯಗಳು ಅಧಿಕವಾಗಿ ಹಲವಾರು ಜನ ಪೆÇಲೀಸ್ ಠಾಣೆಯ ಮೆಟ್ಟಿಲೇರತೊಡಗಿದರು. ಅವರ ನಡುವೆ ಸಂಧಾನ ಏರ್ಪಡಿಸಿ ವಾತಾವರಣ ತಿಳಿಗೊಳಿಸುವ ಶ್ಲಾಘನೀಯ ಕಾರ್ಯವನ್ನು ಪೆÇಲೀಸರು ಮಾಡಿದರು.

ಈ ಎರಡನೇ ಅಲೆಯ ಸರಪಳಿ ತುಂqರಿಸುವ ನಿಟ್ಟಿನಲ್ಲಿ ಪೆÇಲೀಸರ ಪಾತ್ರ ಅತಿ ಪ್ರಮುಖವಾಗಿದೆ. ಇದಕ್ಕೆಲ್ಲ ಮೂಲ ಶ್ರೇಯ ಸಲ್ಲಬೇಕಿರುವುದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ. ಅವರು ಪೆÇಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಮಾರ್ಗದರ್ಶನ ನೀಡಿದ್ದರಿಂದಲೇ ಇದು ಸಾಧ್ಯವಾಯಿತು. ಜೊತೆಗೆ ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್‍ಸೂದ್ ಐಪಿಎಸ್, ಬೆಂಗಳೂರು ಪೆÇಲೀಸ್ ಆಯುಕ್ತ ಕಮಲ್ ಪಂತ್ ಐಪಿಎಸ್ ಅವರ ಪಾತ್ರವೂ ನಗಣ್ಯವೇನಲ್ಲ.

ಅದರಲ್ಲೂ ಇಡೀ ರಾಜ್ಯವೇ ಒಂದು ಭಾಗ, ಬೆಂಗಳೂರೇ ಒಂದು ಭಾಗ ಎನ್ನುವಂತೆ ಕೊರೋನಾ ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಶ್ರೀ ಕಮಲ್‍ಪಂತ್ ಅವರು ಅಪಾರ ಕಾಳಜಿಯಿಂದ ಕಾರ್ಯನಿರ್ವಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಇದರ ಜೊತೆಗೆ ಎಲ್ಲಾ ವಿಭಾಗಗಳ ಡಿಸಿಪಿಗಳೂ ಈ ನಿಟ್ಟಿನಲ್ಲಿ ತುಂಬು ಸಹಕಾರ ನೀಡಿದರು. ರಾಜ್ಯದಾದ್ಯಂತ ಭದ್ರತಾ ಪಡೆಗಳು ಮತ್ತು ಪೆÇಲೀಸ್ ಇಲಾಖೆ ದಿನದ ೨೪ ಗಂಟೆಯೂ ಜಾಗೃತವಾಗಿದ್ದು, ಕೊರೋನಾ ನಿಯಂತ್ರಣಕ್ಕೆ ಮತ್ತು ಜನತೆಯ ರಕ್ಷಣೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಣೆ ಮಾಡಿದವು. ಪೂರ್ಣ ಸಾಮಥ್ರ್ಯದೊಂದಿಗೆ ಕಾರ್ಯ ನಿರ್ವಹಿಸಿದರು. ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಹಾಟ್‍ಸ್ಪಾಟ್‍ಗಳು, ಕಂಟೈನ್‍ಮೆಂಟ್ ವಲಯಗಳು, ರೈಲು ನಿಲ್ದಾಣಗಳು ಮುಂತಾದೆಡೆ ಅಪಾಯ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಕೆಲವೆಡೆ ಪರಿಕರಗಳ ಕೊರತೆ ನಡುವೆಯೂ ಕರ್ತವ್ಯ ಲೋಪವುಂಟಾಗದಂತೆ ಕೆಲಸ ನಿರ್ವಹಿಸಿದ್ದಾರೆ. ಕುಟುಂಬದವರ ಕ್ಷೇಮವನ್ನೂ ಪಣಕ್ಕಿಟ್ಟು ಕರ್ತವ್ಯ ನೆರವೇರಿಸಿದ್ದಾರೆ. ಪತ್ನಿ-ಮಕ್ಕಳು, ತಂದೆ-ತಾಯಿ ಅವರನ್ನೂ ಕಡೆಗಣಿಸಿ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಅದೆಷ್ಟೋ ಪೆÇಲೀಸರಿಗೆ ಸೋಂಕು ತಗುಲಿದೆ. ಅನೇಕ ಪೆÇಲೀಸರು ಮರಣಿಸಿದ್ದಾರೆ. ಈ ಎಲ್ಲ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ. ಈ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಡಿಜಿಟಲ್ ಮಾರುಕಟ್ಟೆಯೊಂದಿಗೆ ಬಾಂಧವ್ಯ ಬೆಳೆಸಿ ಸೃಜನಶೀಲ ವಿಡಿಯೋ, ಅನಿಮೇಷನ್ ಮೂಲಕ ಹಾಡುಗಳು, ನರ್ತನ ಮುಂತಾದವುಗಳನ್ನು ಸೃಜಿಸುವ ಮೂಲಕ ಮಾಸ್ಕ್ ಧರಿಸುವ, ಸ್ಯಾನಿಟೈಸರ್ ಬಳಸುವ, ಸಾಮಾಜಿಕ ಅಂತರ ಕಾಪಾಡುವ ಮತ್ತು ಲಸಿಕೆ ಪಡೆಯುವ ಕುರಿತು ಜಾಗೃತಿ ಮೂಡಿಸಿದ್ದಾರೆ.

ಮನೆಯಿಂದ ಹೊರಬರದಂತೆ ಜನರನ್ನು ತಡೆಯುವಲ್ಲಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕೆಲವೆಡೆ ಬಲಪ್ರಯೋಗ ಮಾಡಿ ಜನರನ್ನು ಎಚ್ಚರಿಸುವಂತಹ ಅನಿವಾರ್ಯ ಪ್ರಸಂಗಗಳೂ ಎದುರಾದವು.

ಇದರ ಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ನಿರ್ವಹಿಸಿದ್ದಾರೆ. ಬಹುತೇಕ ಸ್ಥಳಗಳಲ್ಲಿ ಪೆÇಲೀಸ್ ಠಾಣೆಯನ್ನೇ ಮೂಲ ಸ್ಥಾನವಾಗಿಟ್ಟುಕೊಂಡು, ಅಗತ್ಯ ಇರುವವರಿಗೆ ದಿನಸಿ- ಆಹಾರದ ಕಿಟ್‍ಗಳನ್ನು ವಿತರಿಸಿದ್ದಾರೆ.

ಪೆÇಲೀಸ್ ಇಲಾಖೆ ಈ ರೀತಿಯ ಆವಿಷ್ಕಾರದ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಕರ್ನಾಟಕ ರಾಜ್ಯದ ಜನತೆ ಅವರಿಗೆ ಬಹಳಷ್ಟು ಕೃತಜ್ಞರಾಗಿದ್ದಾರೆ. ಎಷ್ಟೋ ಜನ ಅವರಿಗೆ ಟ್ವಿಟರ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಫೇಸ್‍ಬುಕ್, ಯೂಟ್ಯೂಬ್ ಮೂಲಕ ಪೆÇಲೀಸರಿಗೆ ಕೃತಜ್ಞತೆ ಸಲ್ಲಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೃದಯಸ್ಪರ್ಶಿ ಸಂದೇಶಗಳ ಮೂಲಕ ಪೆÇಲೀಸರು ಇಂಥ ಸ್ತುತ್ಯರ್ಹ ಸೇವೆ ಸಲ್ಲಿಸಿರುವ ದೃಶ್ಯಗಳನ್ನು ಚಿತ್ರೀಕರಿಸಿ ಪೆÇೀಸ್ಟ್ ಮಾಡುವ ಮೂಲಕ ತಮ್ಮ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ವೈದ್ಯಕೀಯ ಸಮುದಾಯ ಬಿಟ್ಟರೆ ಪೆÇಲೀಸರೇ ಅತ್ಯಂತ ಅಪಾಯಕ್ಕೆ ಗುರಿಯಾಗುವ ಸಮುದಾಯವಾಗಿದ್ದಾರೆ. ಆದರೂ ಅಂಥ ಅಪಾಯವನ್ನು ಲೆಕ್ಕಿಸದೆ ನಾಡಿನ ಜನತೆಯ ಸೇವೆಯಲ್ಲಿ ನಿರತರಾಗಿದ್ದಾರೆ.

ರಾಷ್ಚ್ರಪಿತ ಮಹಾತ್ಮಗಾಂಧಿ ಅವರು ಯಾವಾಗಲೂ ಪೆÇಲೀಸ್ ಪಡೆಯು ಉದ್ರಿಕ್ತ ಜನತೆಯ ನಡುವೆ ಅಹಿಂಸಾತ್ಮಕ ಶಾಂತಿ ಪಡೆಯಾಗಿರಬೇಕು ಎಂದು ದೃಷ್ಟಿಸಿದ್ದರು. ಈ ಸನ್ನಿವೇಶದಲ್ಲಿ ಪೆÇಲೀಸ್ ಇಲಾಖೆಯು ತನ್ನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯುವಲ್ಲಿ ಸಫಲವಾಗಿರುವುದಕ್ಕೆ ಇಡೀ ದೇಶವು ಸಾಕ್ಷಿಯಾಗಿದೆ ಮತ್ತು ಪೆÇಲೀಸ್ ಸಿಬ್ಬಂದಿಯು ಅಮೂಲ್ಯ ಸಾಧನೆ ಮಾಡಿ ಲೋಕೋಪಕಾರ ಮಾಡುತ್ತಿರುವುದನ್ನು ನೋಡುತ್ತಿದೆ. ಇದು ಗಾಂಧೀಜಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೆÇಲೀಸ್ ಇಲಾಖೆ ಹಾಕುತ್ತಿರುವ ಮಹತ್ವದ ಹೆಜ್ಜೆಯಾಗಿದೆ.

ಒಟ್ಟಿನಲ್ಲಿ ಕರ್ನಾಟಕ ಪೆÇಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನತೆಯ ಕ್ಷೇಮಾಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸಿದ್ದಾರೆ. ನಾಡಿನ ಜನತೆಯ ಶುಭ ಹಾರೈಕೆಗಳು ಮತ್ತು ಕೃತಜ್ಞತೆಗಳು ಪೆÇಲೀಸರಿಗೆ ಶ್ರೀರಕ್ಷೆಯಾಗಿದೆ.